ಚಾಮರಾಜನಗರ: ಚಾ.ನಗರ ವಿಭಾಗ ವ್ಯಾಪ್ತಿಯ ಬೇಗೂರಿನಲ್ಲಿ ಎಂವಿಎ ಶಕ್ತಿ ಪರಿವರ್ತಕಗಳಿಗೆ ಅಳವಡಿಸಲಾಗಿರುವ ನಿಯಂತ್ರಣ ಕೇಬಲ್‌ಗಳು ಹಾಳಾಗಿದ್ದು ಹೊಸ ಕೇಬಲ್‌ಗಳನ್ನು ಬದಲಾಯಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಹಗಲು ವೇಳೆಯಲ್ಲಿ ನೀಡಲಾಗುತ್ತಿದ್ದ ತ್ರೀಫೇಸ್ ವಿದ್ಯುತ್ ಸರಬರಾಜನ್ನು ಮೇ 12ರಿಂದ 15ರವರೆಗೆ ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಸರಿದೂಗಿಸಲಾಗುವುದು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ತಿಳಿಸಿದೆ.
ಮಲ್ಲಯ್ಯನಪುರ, ಬರಗಿ, ಕೋಡಿಹಳ್ಳಿ, ಬೇರಂಬಾಡಿ, ನೆನೆಕಟ್ಟೆ, ವೀರನಪುರ, ಮೈದನಹಳ್ಳಿ, ಬಾಚಳ್ಳಿ, ಬೊಮ್ಮಲಾಪುರ, ದಾರಿಬೇಗೂರು, ಕೊಡಸೋಗೆ ಮತ್ತು ಹೆಗ್ಗವಾಡಿ, ಕಬ್ಬಳ್ಳಿ, ಸೋಮಳ್ಳಿ ಪಡಗೂರು, ಬಲಚವಾಡಿ, ನಿಟ್ರೆ, ಅಗತಗೌಡನಹಳ್ಳಿ ಹಾಗೂ ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ಕಲ್ಪುರ, ದೇವಲಾಪುರ ಹಾಗೂ ಹೊಂಗಹಳ್ಳಿ ಐಪಿ, ಮುಂಟಿಪುರ ಐಪಿ, ಆಲತ್ತೂರು ಐಪಿ ಮತ್ತು ಮೂಕಳ್ಳಿ ಕಾಲನಿ ಐಪಿ, ಹಂಗಳ, ಶಿವಪುರ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ, ಬೊಮ್ಮನಹಳ್ಳಿ, ಕುಂದಗೆರೆ, ಕಟ್ನವಾಡಿ, ದೇಪಾಪುರ, ಕಗ್ಗಳ, ಕೆಲಸಿಪುರ, ಲಕ್ಕೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಹಗಲು ವೇಳೆಯಲ್ಲಿ ನೀಡಲಾಗುತ್ತಿದ್ದ ತ್ರೀ ಫೇಸ್ ವಿದ್ಯುತ್ ಸರಬರಾಜನ್ನು ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಸರಿದೂಗಿಸಲಾಗುವುದು. ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಗೆ ಕರೆ ಮಾಡುವಂತೆ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.