ಚಿಕ್ಕಮಗಳೂರಿನಲ್ಲಿ ಎಬಿವಿಪಿಯಿಂದ ಆಯೋಜಿಸಲಾಗಿದ್ದ ರಾಣಿ ಅಬ್ಬಕ್ಕ ಅವರ ರಥಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಹಿರೇಮಗಳೂರು ಪುಟ್ಟಸ್ವಾಮಿ, ಸಿದ್ಧಾರ್ಥ, ಧನುಷ್ ಮತ್ತಿತರರು ಪಾಲ್ಗೊಂಡಿದ್ದರು. 
ಜಿಲ್ಲೆ

ರಾಣಿ ಅಬ್ಬಕ್ಕ ರಥಯಾತ್ರೆಗೆ ಚಾಲನೆ

ಚಿಕ್ಕಮಗಳೂರು: ಭಾರತದ ಮೊದಲ ಮಹಿಳಾ ಸ್ವಾತಂತ್ರÈ ಹೋರಾಟಗಾರ್ತಿ ರಾಣಿ ಅಬ್ಬಕ್ಕರ ೫೦೦ನೇ ಜಯಂತ್ಯೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಭಾಗಿತ್ವ ದಲ್ಲಿ ಜಿಲ್ಲೆಗಾಗಮಿಸಿದ ರಥಯಾತ್ರೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ರಥಯಾತ್ರೆಯನ್ನು ಸ್ವಾಗತಿಸಲು ನೂರಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಎಬಿವಿಪಿ ಧ್ವಜವನ್ನಿಡಿದು ನಗರದ ಓಂಕಾರೇಶ್ವರ ದೇವಾಲಯದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ವೀರರಾಣಿ ಅಬ್ಬಕ್ಕರವರ ಜಾಥಾಕ್ಕೆ ಇನ್ನಷ್ಟು ಮೆರಗು ತಂದರು.

ಈ ವೇಳೆ ಮಾತನಾಡಿದ ಸಿ.ಟಿ.ರವಿ, ಭವ್ಯಭಾರತದ ಮೇಲೆ ಪರಕೀಯರ ಆಕ್ರಮಣವಾದಾಗ ಧೈರ್ಯದಿಂದ ಎದುರಿಸಿದ ಕೀರ್ತಿ ಅಬ್ಬಕ್ಕ ಅವರೊಹೆ ಸಲ್ಲುತ್ತದೆ. ಸ್ವಾತಂತ್ರÈ ಹೋರಾಟಗಾರರು ಮೊಘಲರನ್ನು ಮತ್ತು ಬ್ರಿಟೀಷರ ವಿರುದ್ಧ ಮಾತ್ರವಲ್ಲದೇ, ಪ್ರತಿ ಸಂದರ್ಭದಲ್ಲೂ ಭಾರತದ ಮೇಲೆ ಪರಕೀಯರ ದಾಳಿಯಾದಾಗ ದಿಟ್ಟತನದಿಂದ ಹೋರಾಡಿದ್ದಾರೆ ಎಂದರು.

ಅAತಹ ಸಾಲಿನಲ್ಲಿ ವೀರರಾಣಿ ಅಬ್ಬಕ್ಕನವರು ಪೋರ್ಚುಗೀಸರನ್ನು ಎದುರಿಸಿ, ಯಶೋಗಾಧೆಯನ್ನು ದಾಖಲಿಸಿ ಐತಿಹಾಸಿಕವಾಗಿ ನಮ್ಮೆಲ್ಲರಿಗೂ ಸ್ಪೂರ್ತಿ ನೀಡಿದ್ದಾರೆ. ಐದು ಶತಮಾನದ ನಂತರವು ಆ ಮಹಾತಾಯಿ ಅಬ್ಬಕ್ಕರನ್ನು ನೆನಪಿಸಿಕೊಂಡು ನಮಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಎಬಿವಿಪಿ ಜಿಲ್ಲಾ ಪ್ರಮುಖ್ ಕುಮಾರೇಗೌಡ ಮಾತನಾಡಿ, ದಾವಣಗೆರೆ ಜಿಲ್ಲೆಯಿಂದ ಆರಂಭಗೊAಡ ರಾಣಿ ಅಬ್ಬಕ್ಕನವರ ರಥಯಾತ್ರೆಯು ಚಿತ್ರದುರ್ಗ, ತುಮಕೂರು, ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ಆಗಮಿಸಿದೆ. ಇಂದು ಜಿಲ್ಲೆಯ ಬಾಳೆಹೊನ್ನೂರಿನಿಂದ ಶೃಂಗೇರಿಗೆ ತಲುಪಿ ವ್ಯಾಸ್ತವ್ಯ ಹೂಡುವ ಮೂಲಕ ನಾಳೆ ಶಿವಮೊಗ್ಗ ಜಿಲ್ಲೆಗೆ ಪಾದಾರ್ಪಣೆ ಮಾಡಲಿದೆ ಎಂದು ತಿಳಿಸಿದರು.

ರಾಣಿ ಅಬ್ಬಕ್ಕನವರ ಸ್ವಾತಂತ್ರÈ ಸಂಗ್ರಾಮ ಹೋರಾಟವು ಪ್ರತಿಯೊಂದು ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ. ಐನೂರು ವರ್ಷಗಳ ನಂತರವು ಅಬ್ಬಕ್ಕನವರ ನೆನಪನ್ನು ಮೆಲುಕು ಹಾಕಲು ಅವರು ದೇಶಕ್ಕೆ ನೀಡಿರುವ ಕೊಡುಗೆಗಳೇ ಕಾರಣ. ಹೀಗಾಗಿ ಇದೇ ತಿಂಗಳು ಸೆ. ೧೭ರಂದು ಅಬ್ಬಕ್ಕನವರ ಹುಟ್ಟೂರು ಮಂಗಳೂರಿನ ಉಲ್ಲಾಳದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥ, ಸಂಚಾಲಕ ಧನುಶ್, ರಾಜ್ಯಕಾರ್ಯಕಾರಿಣಿ ಸದಸ್ಯ ದೀಪಕ್, ವಿಭಾಗ ಎಸ್‌ಎಫ್‌ಡಿ ಸಂಚಾಲಕ ರಾಕೇಶ್, ರಾಜ್ಯ ಸಹ ಕಾರ್ಯ ದರ್ಶಿ ಗುರುಪ್ರಸಾದ್, ಪ್ರಾಂತ ವಿದ್ಯಾರ್ಥಿನಿ ಪ್ರಮುಖ್ ಸುಧಾ, ನಗರಾಧ್ಯಕ್ಷ ಶ್ರೀಕಾಂತ್, ಮುಖಂಡರು ಗಳಾದ ಪ್ರೇಮ್‌ಕುಮಾರ್, ಗಿರಿಜಾಶಂಕರ್, ಹಿರೇಮಗಳೂರು ಪುಟ್ಟಸ್ವಾಮಿ, ಮಲ್ಲಿಕಾರ್ಜುನ್‌ರಾವ್, ಸೀತರಾಮಭರಣ್ಯ, ಜಸಂತಾ ಅನಿಲ್‌ಕುಮಾರ್, ಪ್ರದೀಪ್, ಕೆ.ಪಿ.ವೆಂಕಟೇಶ್, ಎಚ್.ಕೆ.ಕೇಶವಮೂರ್ತಿ ಇದ್ದರು.