ಜಿಲ್ಲೆ

ರಾಜ್ಯೋತ್ಸವದಲ್ಲಿ 28 ಸಾಧಕರಿಗೆ ಸನ್ಮಾನ

ಚಿತ್ರದುರ್ಗ: ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 28 ಸಾಧಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿಗೆ ಜಿಲ್ಲಾಡಳಿತ ಆಯ್ಕೆ ಮಾಡಿದ್ದು, ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದ್ದಾರೆ.

ಕ್ರೀಡಾ ಕ್ಷೇತ್ರದಿಂದ ವರ್ಷ, ಶ್ರೇಯಾ, ರವಿ ಅಂಬೇಕರ್, ಕೃಷಿ-ಡಾ.ಆರ್.ಎ.ದಯಾನಂದಮೂರ್ತಿ, ಕೆ.ಸಿ.ಹೊರಕೇರಪ್ಪ, ಚಿತ್ರಕಲೆ-ಮೋಹನ ಮುರಳಿ, ಟಿ.ಎಂ.ವೀರೇಶ್, ಭೂವಿಜ್ಞಾನಿ-ಜಿ.ಪರಶುರಾಮ, ಸಂಶೋಧನೆ-ಡಾ.ಆರ್.ಎಸ್.ದೀಪಕ್, ವೈದ್ಯಕೀಯ ಡಾ.ಪಿ.ವಿ.ಶ್ರೀಧರಮೂರ್ತಿ, ಡಾ.ಬಿ.ಚಂದ್ರನಾಯ್ಕ್, ಶಿಕ್ಷಣ-ಹನುಮಂತಪ್ಪ, ಜಿ.ಎಸ್.ವಸಂತ, ಸಾಮಾಜಿಕ ಸೇವೆ-ಡಾ.ಸೌಮ್ಯಾ, ವೀಣಾ ಗೌರಣ್ಣ, ಸಾಹಿತ್ಯ-ಪ್ರೊ.ಜಿ.ಪರಮೇಶ್ವರಪ್ಪ, ಬಾಗೂರು ಆರ್.ನಾಗರಾಜಪ್ಪ, ರಂಗಭೂಮಿ-ಎಸ್.ಡಿ.ರಾಮಸ್ವಾಮಿ, ಡಿ.ಶ್ರೀಕುಮಾರ್, ಸಂಗೀತ-ಶೈಲಜಾ ಸುದರ್ಶನ್, ಡಿ.ಓ.ಮುರಾರ್ಜಿ, ಜಾನಪದ-ಜಿ.ರಾಜಣ್ಣ, ಶ್ರೀನಿವಾಸ, ಪತ್ರಿಕೋದ್ಯಮ-ಎಚ್.ಲಕ್ಷ್ಮ್ಮಣ, ರವಿ ಮಲ್ಲಾಪುರ, ವಿ.ವೀರೇಶ್, ಛಾಯಾಗ್ರಹಣ-ಮಂಜುನಾಥ್, ದ್ವಾರಕನಾಥ್.