ಕನ್ನಡ ರಾಜ್ಯೋತ್ಸವ ಕುರಿತು ತಹಸಿಲ್ ಕಚೆರಿಯಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಚ್.ಎ.ಸರಕಾವಸ್ ಮಾತನಾಡಿದರು. 
ಜಿಲ್ಲೆ

ರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

ಸುರಪುರ: ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಚ್.ಎ.ಸರಕಾವಸ್ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ರ ಒಳಗಾಗಿ ಶಾಲಾ-ಕಾಲೇಜು, ಅಂಗನವಾಡಿ, ಗ್ರಾಮ ಪಂಚಾಹಯಿತಿ, ವಸತಿ ನಿಲಯ ಸೇರಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಿಸಬೇಕು ಎಂದು ಹೇಳಿದರು.

ನಂತರ 10 ಗಂಟೆಗೆ ತಹಸಿಲ್ ಎದುರು ತಾಲೂಕು ಆಡಳಿತದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ಹಿರಿಯ ಸಾಹಿತಿ, ಕಲೆ, ಶಿಲ್ಪಗಾರ, ಸಂಗೀತ, ಕೃಷಿ, 2023-24ನೇ ಸಾಲಿನ ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಶೇ.ಪ್ರತಿಶತ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ತಾಪಂ ಇಒ ಬಸವರಾಜ ಸಜ್ಜನ್, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಬಿಇಒ ಯಲ್ಲಪ್ಪ ಕಾಡ್ಲೂರ, ಡಬ್ಲುÈಆರ್‌ಎಸ್ ಎಇಇ ಹಣಮಂತಪ್ಪ, ಸಿಡಿಪಿಒ ಅನಿಲ ಕಾಂಬ್ಳೆ, ಎಸ್‌ಟಿಒ ಸಣ್ಣೆಕ್ಕೆಪ್ಪ, ತೋಟಗಾರಿಕೆ ಅಧಿಕಾರಿ ರೇಣುಕಾ, ಪಿಎಸ್‌ಐ ಸಿದ್ದಣ್ಣ ನಾಯಕ, ಕಂದಾಯ ನಿರೀಕ್ಷಕ ಬಸವರಾಜ, ಗುರುಬಸಪ್ಪ ಪಾಟೀಲ್, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಭೀಮನಗೌಡ ನಾಯಕ, ಕರವೇ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ಮುಖಂಡರಾದ ಭೀಮು ನಾಯಕ ಮಲ್ಲಿಭಾವಿ, ಶಿವುಮೋನಯ್ಯ ನಾಯಕ, ನಿಂಗಪ್ಪ ನಾಯಕ ಬಿಜಾಸ್ಪೂರ, ಹಣಮಗೌಡ ಶಖಾಪುರ ಇತರರಿದ್ದರು.