ಜಿಲ್ಲೆ

ರಾಜ್ಯಾಧ್ಯಕ್ಷೆಯಾಗಿ ಯಮನವ್ವ ಆಯ್ಕೆ

ಹಂದಿಗುಂದ: ಮಹಾನಾಯಕ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘದ ಮಹಿಳಾ ಘಟಕದ ರಾಜಾಧ್ಯಕ್ಷೆಯಾಗಿ ಮೂಡಲಗಿ ಪಟ್ಟಣದ ಸಮಾಜ ಸೇವಕಿ ಯಮನವ್ವ ತಳವಾರ ಅವಿರೋಧ ಆಯ್ಕೆಯಾಗಿದ್ದಾರೆಂದು ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಜಕ್ಕಣ್ಣವರ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಈಚೆಗೆ ಜರುಗಿದ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮುರಗೋಡ, ಅಜಯ ನಾಯಿಕ ಇದ್ದರು.