ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಿಕ್ಷಕ ಕೆ.ವಿ. ಶ್ರೀಕಾಂತ ಅವಿರೋಧವಾಗಿ ಆಯ್ಕೆಯಾದರು.
ರಾಜ್ಯ ಘಟಕಕ್ಕೆ ಗುರು ತಿಗಡಿ ಹಾಗೂ ಗುರು ಪೋಳ (ಗೌರವಾಧ್ಯಕ್ಷ), ಡಾ. ಗುರುಮೂರ್ತಿ ಯರಗಂಬಳಿಮಠ, ಶಿವರಾಜ ಕಪಲಾಪುರಿ, ಸಿ.ಎಂ. ಕಿತ್ತೂರ ಮತ್ತು ಎಸ್.ಬಿ. ಪಾಟೀಲ (ಮಹಾಪೋಷಕರು), ಚಿಂತಾಮಣಿಯ ಡಾ. ಆರ್. ನಾರಾಯಣಸ್ವಾಮಿ (ಕಾರ್ಯಾಧ್ಶಕ್ಷ), ಸಂಗಮೇಶ ಖನ್ನಿನಾಯ್ಕರ ಹಾಗೂ ಶಾರದಾ ಶಿರಕೋಳ (ಉಪಾಧ್ಯಕ್ಷರು), ಎಂ.ಎನ್. ಸತ್ತೂರ (ಕೋಶಾಧ್ಶಕ್ಷ), ಶಂಕರಪ್ಪ ಘಟ್ಟಿ (ಪ್ರಧಾನ ಕಾರ್ಯದರ್ಶಿ), ರಯಿಸ್ ಫಾತೆಮಾ (ಸಂಘಟನಾ ಕಾರ್ಯದರ್ಶಿ), ಸುರೇಶ ಟಾಳೆ (ಜಿಲ್ಲಾಧ್ಯಕ್ಷ-ಬೀದರ), ಎನ್. ನಾಗರಾಜ (ಜಿಲ್ಲಾಧ್ಯಕ್ಷ-ಬೆಂಗಳೂರು ದಕ್ಷಿಣ ಜಿಲ್ಲೆ), ಪಾಂಡುರಂಗ ದಾಸರ (ಅಧ್ಯಕ್ಷ - ಹುಬ್ಬಳ್ಳಿ ಶಹರ ಘಟಕ), ವಸಂತ ಭಜಂತ್ರಿ (ಕಾರ್ಯದರ್ಶಿ-ಅಳ್ನಾವರ ತಾಲೂಕ ಘಟಕ) ಆಯ್ಕೆಯಾದರು.
ಬಳಿಕೆ ವರ್ಗಾವಣೆ ಸೇರಿ ಪ್ರಾಥಮಿಕ ಶಿಕ್ಷಕರು ಎದುರಿಸುತ್ತಿರುವ ಎದುರಿಸುತ್ತಿರುವ ಹಲವಾರು ಪ್ರಮುಖ ಸಮಸ್ಯೆಗಳ ನಿವಾರಣೆ ಕುರಿತು ಚರ್ಚಿಸಲಾಯಿತು. ಜಿಲ್ಲಾಧ್ಯಕ್ಷ ಆರ್.ಎಸ್. ಹಿರೇಗೌಡರ, ಆರ್.ಬಿ. ಮಂಗೋಡಿ, ಎಸ್.ಬಿ. ಶಿವಸಿಂಪಿ, ಗಂಗಮ್ಮ ಕೋಟಿಗೌಡರ, ಕಾಶಪ್ಪ ದೊಡವಾಡ, ಅಲ್ಲಾಭಕ್ಷ ನದಾಫ, ಚಂದ್ರು ತಿಗಡಿ, ಶಕುಂತಲಾ ಅರಮನಿ, ಐ.ಎಚ್. ನದಾಫ, ಎಂ.ಜಿ. ಸುಬೇದಾರ, ರಾಜು ಮಾಳವಾಡ, ಆರ್.ಎನ್. ಬಸ್ತವಾಡಕರ, ಎ.ಎ. ಮುಲ್ಲಾ, ಜೆ.ಜಿ. ಹೆಬ್ಬಾಳ, ಮಹಾದೇವಿ ದೊಡಮನಿ, ಇತರರು ಇದ್ದರು.
ಶಂಕರಪ್ಪ ಘಟ್ಟಿ ಸ್ವಾಗತಿಸಿದರು. ಎಸ್.ಬಿ. ಶಿವಸಿಂಪಿ ವಂದಿಸಿದರು.