ಎಸ್ ಎಲ್ ಕೋರಾ  
ಜಿಲ್ಲೆ

ರಾಜ್ಯಾಧ್ಯಕ್ಷರಾಗಿ ಎಸ್ ಎಲ್ ಕೋರಾ ನೇಮಕ

ಬಾಗಲಕೋಟೆ: ಕರ್ನಾಟಕ ಆವೋಪಗಳ ಒಕ್ಕೂಟ ಬೆಂಗಳೂರಿನ 6 ನೇ ರಾಜ್ಯಾಧ್ಯಕ್ಷರಾಗಿ,ಬಾಗಲಕೋಟೆ ಜಿಲ್ಲಾ ಸರ್ಕಾರಿ ವಕೀಲರಾದ ಎಸ್ ಎಲ್ ಕೋರಾ ನೇಮಕಗೊಂಡಿದ್ದಾರೆ.

ಬಾಗಲಕೋಟೆ ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘದ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆರ್ಯವೈಶ್ಯೆ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘದ 29 ಘಟಕಗಳು ಸೇರಿ ಕರ್ನಾಟಕ ಆವೋಪಗಳ ಒಕ್ಕೂಟ ಎಂದು ಮಾಡಿಕೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆಯವರು ಇದೇ ಪ್ರಥಮ ಭಾರಿಗೆ ರಾಜ್ಯಾಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ.ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿ ಹೊಂದಲಾಗಿದೆ ಎಂದು ಸೆ.22 ,ರವಿವಾರ ರಂದು ತುಮಕೂರ ದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ಸ್ವೀಕಾರಿಸಿ ಬಳಿಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.