ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ಸಮೀಪದ ಜೆಡಿಎಸ್ ಕಚೇರಿ ಎದುರು ಪಂಜಿನ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು. ಎಸ್.ಎಲ್.ಭೋಜೇಗೌಡ, ಕುಮಾರ್ ಗೌಡ, ಗೋಪಿ, ರಂಜನ್ ಅಜಿತ್, ಶಿಲಾ ದಿನೇಶ್, ದಿನೇಶ್ ಮತ್ತಿತರರಿದ್ದರು. 
ಜಿಲ್ಲೆ

ರಾಜ್ಯಸರ್ಕಾರದ ವೈಫಲ್ಯತೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯಸರ್ಕಾರದ ಆಡಳಿತ ವೈಫಲ್ಯಗೊಂಡಿದೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಚಾರ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡರು ಹನುಮಂತಪ್ಪ ವೃತ್ತದಲ್ಲಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಭ್ರಷ್ಟಚಾರ ಮುಗಿಲುಮುಟ್ಟಿದೆ. ಭ್ರಷ್ಟಚಾರದಲ್ಲಿ ಸಂಪೂರ್ಣವಾಗಿ ಮುಳುಗಿರುವ ರಾಜ್ಯಸರ್ಕಾರ ಕೂಡಲೇ ಅಧಿಕಾರವನ್ನು ತ್ಯಜಿಸಬೇಕಿದೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮಕ್ಕೆ ಮೀಸಲಿಸಿರಿದ ಅನುದಾನ ದುರುಪಯೋಗ, ಭಾರೀ ಭ್ರಷ್ಟಚಾರಗಳು ಮುಗಿಲುಮುಟ್ಟಿದೆ. ಬಡವರಿಗೆ ಕೊಡಬೇಕಾದ ವಾಸದ ಮನೆಯ ವಿಚಾರದಲ್ಲೂ ಭ್ರಷ್ಟಚಾರ ಎಸಗಲಾಗಿದೆ ಎಂದು ಸ್ವ ಪಕ್ಷದ ಶಾಸಕರೇ ಆರೋಪಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಸತ್ಯಾತ್ಯತೆ ಬಯಲಿಗೆಳೆಯದೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬAಧ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ಭ್ರಷ್ಟತನವನ್ನು ಜನತೆಯ ಮುಂದಿಡುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಬೃಹತ್ ಆಂದೋಲನವನ್ನು ನಡೆಸುತ್ತಿದೆ ಎಂದರು.

ರಾಜ್ಯದ ಯುವಕರು, ರೈತರು ಹಾಗೂ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ದ್ರೋಹವೆಸಗಿ ಹಣ ವನ್ನು ಲೂಟಿ ಮಾಡುತ್ತಿದೆ. ಈ ಸರ್ಕಾರದಿಂದ ಬಡವರು, ಮದ್ಯಮವರ್ಗದವರು ಬದುಕಲಾರದ ಸ್ಥಿತಿಗೆ ಬಂದಿದ್ದಾರೆ. ಸರ್ಕಾರ ನೈತಿಕ ಹಕ್ಕು ಕಳೆದುಕೊಂಡಿದ್ದು ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಮಾತನಾಡಿ, ರಾಜ್ಯನಾಯಕರ ಆದೇಶದನ್ವಯ ಜಿಲ್ಲೆಯಾದ್ಯಂತ ಭ್ರಷ್ಟ ರಾಜ್ಯಸರ್ಕಾರದ ವಿರುದ್ಧ ಅಭಿಯಾನ ಹಮ್ಮಿಕೊಂಡಿz್ದೆÃವೆ. ಜೊತೆಗೆ ಯುವನಾಯಕ ನಿಖಿಲ್‌ಕುಮಾರಸ್ವಾಮಿ ಜನಾಂದೋಲನ ಹಾಗೂ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಿ ಕಾರ್ಯಕರ್ತರಲ್ಲಿ ಹುರುಪು ತುಂಬುತ್ತಿದ್ದಾರೆ ಎಂದರು.

ನಗರಸಭೆ ಸದಸ್ಯ ಎ.ಸಿ.ಕುಮಾರಗೌಡ ಮಾತನಾಡಿ, ವಾಲ್ಮೀಕಿ, ಮುಡ, ಪಡಿತರ ಚೀಟಿ ಹಗರಣ ಮತ್ತು ವಸತಿ ಯೋಜನೆಯ ಭ್ರಷ್ಟಚಾರ ಸೇರಿದಂತೆ ಸಾಲು ಸಾಲು ಹಗರಣಗಳು ರಾಜ್ಯಸರ್ಕಾರದಲ್ಲಿ ಕೇಳಿ ಬರುತ್ತಿದೆ. ಆರ್ಥಿಕ ಸಬಲರಾದವರಿಗೆ ಮಾತ್ರ ವಸತಿ ಎಂಬ ನಿಯಮ ರೂಪಿಸಿ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗೋಪಿ, ಶೀಲಾ ದಿನೇಶ್, ಮಾಜಿ ಸದಸ್ಯ ದಿನೇಶ್, ಜೆಡಿಎಸ್ ಜಿಲ್ಲಾ ಉಪಾದ್ಯಕ್ಷ ಲಕ್ಷö್ಮಣ್‌ಗೌಡ, ತಾಪಂ ಮಾಜಿ ಸದಸ್ಯ ಆನಂದ್‌ನಾಯ್ಕ್, ಮುಖಂಡರಾದ ಡಿ.ಜೆ.ಸುರೇಶ್, ದೇವರಾಜ್‌ಅರಸ್, ನಂದೀಶ್, ಮೂರ್ತಿ, ಚೇತನ್, ಸಿದ್ದಿಕ್, ಜಾಕರೀಯಾ ಜಾಕೀರ್, ಈಶ್ವರೇಗೌಡ, ರವಿ, ಸತೀಶ್, ಜಯಂತಿ, ರತ್ನ ಮತ್ತಿತರರಿದ್ದರು.