ಬಸವಕಲ್ಯಾಣದಲ್ಲಿ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಕರಪತ್ರಗಳನ್ನು ಬುಧವಾರ ಬಿಡುಗಡೆಗೊಳಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟz್ದೆÃವರು, ಶ್ರೀ ಗುರುಬಸವ ಪಟ್ಟz್ದÉÃವರು, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವ ದೇವರು, ಶ್ರೀ ಚನ್ನಬಸವ ದೇವರು, ಪೂಜ್ಯ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಅಮರಪಾಲ, ಮೋಹನರಡ್ಡಿ, ಗುರುನಾಥ ಗಡ್ಡೆ, ಕಲ್ಯಾಣರಾವ ಮದರಗಾಂವಕರ್ ಇದ್ದರು. 
ಜಿಲ್ಲೆ

ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ನ.17ಕ್ಕೆ

ಬಸವಕಲ್ಯಾಣ: ವಿಶ್ವ ಬಸವ ಧರ್ಮ ಟ್ರಸ್ಟ್ನಿಂದ ನ.23, 24ರಂದು ಹಮ್ಮಿಕೊಂಡಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ ನ.17ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಅನುಭವ ಮಂಟಪ ಪರಿಸರದಲ್ಲಿ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯP್ಷÀರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ಹೇಳಿದರು.

ನಮ್ಮ ಜೀವಾಳವಾಗಿರುವ ಶರಣರ ವಚನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯದಿಂದ ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 20 ಸಾವಿರ ರೂ., ದ್ವಿತೀಯ 15 ಸಾವಿರ ಹಾಗೂ ತೃತೀಯ 10 ಸಾವಿರ ರೂ. ನೀಡಲಾಗುವುದು. ಈ ವರ್ಷದಿಂದ ಸುಶೀಲಾಬಾಯಿ ಚಾರಿಟೇಬಲ್ ಟ್ರಸ್ಟ್ನಿಂದ ಬಹುಮಾನ ಹೆಚ್ಚಿಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಪರ್ಧೆಯಿಂದಾಗಿ ಮಕ್ಕಳಲ್ಲಿ ವಚನ ಪ್ರಜ್ಞೆ ಮೂಡುತ್ತದೆ. ವಚನಗಳು ಜೀವಂತಿಕೆಯಾಗಿ ಉಳಿದರೆ ಹೆಚ್ಚು ಜನರಿಗೆ ತಿಳಿಯುತ್ತದೆ. ಲಿಂಗಾಯತ ಧರ್ಮದ ಪೂರ್ಣಜ್ಞಾನ ದೊರೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಈ ಸ್ಪರ್ಧೆಯಲ್ಲಿ ಬೆಂಗಳೂರು, ಧಾರವಾಡ, ಹುಬ್ಬಳಿ, ಬೆಳಗಾವಿ ಸೇರಿ ರಾಜ್ಯದ ಅನೇಕ ಕಡೆಗಳಿಂದ ಜನ ಆಗಮಿಸುತ್ತಿದ್ದಾರೆ. ಸ್ಪರ್ಧೆಗೆ ಸ್ವಂತ ಖರ್ಚಿನಲ್ಲಿ ಆಗಮಿಸಬೇಕು. ವಯಸ್ಸಿನ ಯಾವುದೇ ಮಿತಿ ಇಲ್ಲ ಎಂದು ಹೇಳಿದರು.

ಅನುಭವ ಮಂಟಪ ಕೇವಲ ಕಟ್ಟಡವಾಗಿರದೆ ಜೀವಂತಿಕೆ ಬರಬೇಕಾದರೆ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಕೋರಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಮಠಾಧೀಶರೊಂದಿಗೆ ಇನ್ನೊಮ್ಮೆ ನಿಯೋಗ ಕೊಂಡೊಯ್ದು ಮನವಿ ಮಾಡುವುದಾಗಿ ತಿಳಿಸಿದರು. ಶ್ರೀ ಗುರುಬಸವ ಪಟ್ಟz್ದÉÃವರು ಮಾತನಾಡಿದರು.