ಕಲಬುರಗಿ: ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಕ್ರ ಎಸೆತದಲ್ಲಿ ವೇದಾಂತ ಯಾದವಹಳ್ಳಿ ಪ್ರಥಮ ಸ್ಥಾನ, ೫ ಕಿ.ಮೀ.ನಡಿಗೆಯಲ್ಲಿ ಮೆಹೆಬೂಬ್ ಪಟೇಲ್ ಪ್ರಥಮ ಸ್ಥಾನ, ಹರ್ಡಲ್ಸ್ನಲ್ಲಿ ಶ್ರೀನಿವಾಸ ದ್ವಿತೀಯ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಆಡಳಿತ ಮಂಡಳಿ, ಪ್ರಾಂಶುಪಾಲ ಸಂತೋಷ ಕುಲ್ಕರ್ಣಿ, ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.