ಕಲಬುರಗಿ: ದಸರಾ ಸಿಎಂ ಕಪ್ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ಹಾಕಿ ತಂಡದ ಪಟುಗಳ ಅದ್ಭುತ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ವಿಭಾಗದ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ಪಟುಗಳಾದ ಪವನ ಕೆಜೆ, ಧನೂಷ್ ಕೆಎಂ., ಪ್ರಜ್ವಲ್ ಬಿಜ್ವಾಡ್, ದೀಪಕ ಯಾದವ್, ಸಂಜು ಬಳ್ಳುರಗಿ, ಪಿಳ್ಳಾ ಆಕಾಶ, ಮನೋಜ, ರವಿ, ಯಶಸ್ಸ್ ಪೊನ್ನಪ್ಪ, ಹರಿರಾಮ, ಪವನ, ವಿಶ್ವಜೀತ್, ಪವನ, ಅಶೋಕ ನಿಂಬೂರ, ಹರ್ಷವರ್ಧನ, ಸತೀಶ, ಗಣೇಶ, ಭೀಮಾಶಂಕರ ಅವರ ತಂಡ ಬಳ್ಳಾರಿ ಜಿಲ್ಲೆಯ ತಂಡದೊAದಿಗೆ ಸೆಣಸಾಗಿ ಭರ್ಜರಿ ೭-೩ ಗೋಲ್‌ನಿಂದ ಗೆಲುವು ಸಾಧಿಸಿದೆ.
೧೫ ವರ್ಷದ ನಂತರ ಕಲಬುರಗಿ ತಂಡ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲೆಯ ತಂಡ ಸಾಧನೆಗೆ ಯುವಜನ ಕ್ರೀಡಾ ಇಲಾಖೆ ನಿರ್ದೇಶಕ ಕೆ.ಸುರೇಶ, ಹಾಕಿ ತರಬೇತುದಾರ ಸಂಜಯ ಬಾಣದ, ಪ್ರವೀಣ ಪುಣೆ ಹರ್ಷ ವ್ಯಕ್ತಪಡಿಸಿದ್ದಾರೆ.