ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ಪಕ್ಷ ಹಿಂದುತ್ವದ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಸಚಿವ ಪ್ರಿಯಾಂಕ ಖರ್ಗೆ ಮಾತ್ರ ತಮಗೆ ಸಾಪ್ಟ್ಹಿಂದುತ್ವ ಹಾಗೂ ಹಾರ್ಡ್ಹಿಂದುತ್ವದ ಬಗ್ಗೆ ಗೊತ್ತಿಲ್ಲ. ಆ ತತ್ವದ ಮೇಲೆ ನಂಬಿಕೆ ಇಲ್ಲ ಎಂದ ಮೇಲೆ ಮುಗಿಯಿತು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಬುಧವಾರ ನಗರದ ಪಕ್ಷದ ಕಚೇರಿಗೆ ಆಗಮಿಸಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ನಡೆಯುತ್ತಿರುವುದು ಬಸವಣ್ಣನ ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಮೇಲೆ, ಬುದ್ದನ ತತ್ವದ ಮೇಲೆ ಹಾಗೂ ಡಾ.ಅಂಬೇಡ್ಕರ್ಅವರ ಸಂವಿಧಾನದ ಆಧರದ ಮೇಲೆ. ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಇದು ಸಾಪ್ಟ್ಹಿಂದುತ್ವ, ಆ ಹಿಂದುತ್ವ ಅಂತಲ್ಲ. ಯಾವ ತತ್ವದಲ್ಲಿ ಎಲ್ಲ ಸಮಾಜಗಳಿಗೂ ಅವಕಾಶ ಇಲ್ಲ, ಆ ತತ್ವದಲ್ಲಿ ನನಗೆ ನಂಬಿಕೆ ಇಲ್ಲ ಎಂದರು.
ನಮ್ಮ ದೇಶ ಹಾಗೂ ರಾಜ್ಯ ಯಾವುದೇ ಗ್ರಂಥದ ಆಧಾರದ ಮೇಲೆ ನಡೆಯುತ್ತಿಲ್ಲ. ನಮ್ಮ ರಾಜ್ಯದಲ್ಲಿ ಕುರಾನ್, ಬೈಬಲ್, ಭಗವದ್ಗೀತಾ ಮೇಲೆ ಆಡಳಿತ ನಡೆಯುತ್ತಿಲ್ಲ. ನಾವು ಸಂಪೂರ್ಣವಾಗಿ ಬುದ್ದ, ಬಸವ, ಅಂಬೇಡ್ಕರ್ಅವರನ್ನು ಅನುಸರಿಸುತ್ತೇವೆ ಎಂದ ಅವರು, ಕುಮಾರಸ್ವಾಮಿ ಅವರದ್ದು ಮೃಧು ಹಿಂದುತ್ವ ಅಲ್ಲ, ಅವರು ಕೇಸರೀಕರಣ ಆಗಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಅಯೋದ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ರಾಮ ಮಂದಿರ ಕಟ್ಟಿಸಿದ್ದಾರೆ, ಒಳ್ಳೆಯದಾಗಲಿ. ಆದರೆ, ಜನರು ಕೇಳುತ್ತಿರುವುದು ರಾಮ ಮಂದಿರ ಆಯ್ತಪ್ಪ, ರಾಮ ರಾಜ್ಯ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಯಾವಾಗ ಬಗೆಹರಿಯತ್ತದೆ, ಯಾವಾಗ ಆರ್ಥಿಕ ಅಸಮಾನತೆ ದೂರ ಆಗುತ್ತದೆ, ಬೆಲೆ ಏರಿಕೆಯಿಂದ ಮುಕ್ತಿ ಯಾವಾಗ? ಬರೀ ಬೋಗಸ್ಹೊಡಕೊಂಡು ಹೋಗುತ್ತಿದ್ದಾರಲ್ಲ, ರಾಮರಾಜ್ಯ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಿ ಎಂದು ಸವಾಲ್ಎಸೆದರು.
ನಮ್ಮದು(ಕಾಂಗ್ರೆಸ್)ಆಚಾರ ವಿಚಾರ ಇದೆ. ಆದರೆ, ಪ್ರಚಾರ ಇಲ್ಲ. ಆದರೆ, ಅವರು (ಕೇಂದ್ರ ಸರ್ಕಾರ) ಎಲ್ಲ ರಾಜ್ಯಗಳಿಂದ ಯೋಜನೆಗಳು ಶೇ. ೫೦ ಹಣ ಪಡೆದುಕೊಂಡು ತಾವು ನೂರು ಪರ್ಸೆಂಟ್ಪ್ರಚಾರ ಪಡೆದುಕೊಳ್ಳುತ್ತಾರೆ. ಎಲ್ಲವೂ ಜನರ ತೆರಿಗೆ ದುಡ್ಡಿನಿಂದ ಆದರೂ ಅವರು ತಮ್ಮದೇ ಜೇಬಿನಿಂದ ದುಡ್ಡು ಖರ್ಚು ಮಾಡಿದ್ದೇವೆ ಎನ್ನುವ ರೀತಿ ಬಿಂಬಿಸುತ್ತಾರೆ. ನಾವು ಐದು ಗ್ಯಾರಂಟಿಗಳನ್ನು ಕೊಟ್ಟಾಗ ಆರ್ಥಿಕ ನಷ್ಟ ಆಗುತ್ತದೆ ಎಂದರು.
ಮಧ್ಯಪ್ರದೇಶದಲ್ಲಿ ನಮ್ಮ ಗೃಹಲಕ್ಷ್ಮೀ ಯೋಜನೆಯನ್ನೆ ಲಾಡ್ಲಿ ಬೆಹನಾ ಎಂದು ಮಾಡಿ ಅದರಿಂದ ಗೆದ್ದಿದ್ದಾರೆ. ಅವರು ಕೊಟ್ಟರೆ ಜನಕಲ್ಯಾಣ, ನಾವು ಕೊಟ್ಟರೆ ತೆರಿಗೆ ಹಣ ನಷ್ಟ ಎನ್ನುತ್ತಾರೆ. ಬಿಜೆಪಿಯವರದ್ದು ದ್ವಂದ್ವ ನೀತಿ ಇದೆ. ನಮ್ಮ ಗ್ಯಾರಂಟಿ ನೋಡಿ ಈಗ ಮೋದಿ ಗ್ಯಾರಂಟಿ ಎಂದು ಜಾಹೀರಾತು ಪ್ರಾರಂಭ ಮಾಡಿದ್ದಾರೆ. ಜಲಮಿಷನ್, ಆರೋಗ್ಯ ಆಯುಷ್ಮಾನ, ಮನರೇಗಾದಲ್ಲೂ ನಮ್ಮ ದುಡ್ಡು ಇದೆ. ಶೇ.೫೦ ಹಣ ಕನ್ನಡಿಗರದ್ದು ಇದೆ. ಎಲ್ಲ ರಾಜ್ಯಗಳಿಂದಲೂ ಹಣ ತೆಗೆದುಕೊಂಡು ನೂರು ಪರ್ಸೆಂಟ್ಪ್ರಚಾರ ತಾವೇ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.