ಜಿಲ್ಲೆ

ರಾಜ್ಯದಲ್ಲಿ ಕೇಶವಕೃಪಾ ಆಡಳಿತ ಇಲ್ಲ; ಬಸವ ತತ್ವ- ಸಂವಿಧಾನ ಪರ ಸರ್ಕಾರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ :
ಹಿಂದುತ್ವದ ಅಜೆಂಡಾ ತೆಗೆದುಕೊಂಡು ಹೋದ ಬಿಜೆಪಿಯವರು ಮಾಡಿದ ಅಕ್ರಮಗಳಿಂದ, ಬಡವರಿಗೆ ಕೊಡಬೇಕಾಗಿದ್ದ ಐದು ಕೆಜಿ ಅಕ್ಕಿಯನ್ನು ಕಿತ್ತು ಕೊಂಡಿದ್ದ ರಿಂದ ಅವರ ಶಾಪ ತಟ್ಟಿ ಈಗ ಅಧಿಕಾರ ಕಳೆದುಕೊಂಡು ಕುಳಿತುಕೊಂಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಹಿಂದುತ್ವ ಅಂದು ಬಿಜೆಪಿಯವರು ಏನು ಮಾಡಿದರು ಎಂದು ಇಂದು ನಗರದಲ್ಲಿ ಪತ್ರಿಕರ್ತರ ಜತೆಗೆ ಮಾತನಾಡಿ

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಪ್ರತಿದಿನ ೫೫ ಲಕ್ಷ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಒಡಾಡುತ್ತಿದ್ದಾರೆ. ಇದು ಅವರ ಸುಸ್ಥಿರ ಆರ್ಥಿಕ ಬದುಕಿಗೆ ಸಾಕ್ಷಿಯಾಗಿದೆ. ಇನ್ನೂ ಧರ್ಮಸ್ಥಳ ಸೇರಿದಂತೆ ಎಲ್ಲ ಪುಣ್ಯಕ್ಷೇತ್ರಗಳು ರಶ್ ಆಗಿವೆ. ಮುಜರಾಯಿ ಇಲಾಖೆ ದೇವಸ್ಥಾನ ಹುಂಡಿಗಳು ತುಂಬುತ್ತಿವೆ ಇದು ನೋಡಿದಾಗ ಕಾಂಗ್ರೆಸ್ ಕೊಟ್ಟ ಯೋಜನೆಯಿಂದ ಅಸಲಿಯಾಗಿ ಜನರು ದೇವರ ದರ್ಶನ ಮಾಡುತ್ತಿದ್ದಾರೆ ಎಂದರು.
ಇAತಹ ಯೋಜನೆ ಬಿಜೆಪಿ ಯಾಕೆ ಮಾಡಲಿಲ್ಲ. ಅವರಿಗೆ ಭಾವನಾತ್ಮಕವಾಗಿ ಆಟ ಆಡಿಸುವುದಷ್ಟೆ ಬೇಕು ಹೊರತು ಪ್ರಗತಿ ಅಲ್ಲ. ಪರೇಶ್ ಮೆಸ್ತಾ ಪ್ರಕರಣ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಶವ ಕೃಪಾ ತರಬೇತಿಯಿಂದ ಕೆಲವರು ಹೀಗೆ ಮಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ  ಕೇಶವ ಕೃಪಾ ಸರ್ಕಾರದ ಆಡಳಿತ ಇಲ್ಲ ಎಂಬುದು ಅರಿತುಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ಸೂಚ್ಯವಾಗಿ ಹೇಳಿದರು. ರಾಜ್ಯದಲ್ಲಿರುವುದು ಬಸವ ತತ್ವದ ಸರ್ಕಾರ, ಸಂವಿಧಾನ ಪರವಾಗಿರುವ ಸರ್ಕಾರ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.