ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ ಪೋಸ್ಟ್ ನ ಖಾಸಗಿ ಕಲ್ಯಾಣ ಮಂಟಪದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರ ಸಭೆಯನ್ನು ಉದ್ಘಾಟಿಸಿ ಬಾಬು ಜಗಜೀವನರಾಮ್ ಅವರ ಮೊಮ್ಮಗ ಡಾ. ಅನ್ಸುಲ್ ಅವಿಜಿತ್ ಮಾತಾಡಿದರು. 
ಜಿಲ್ಲೆ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ

ಎಚ್.ಡಿ.ಕೋಟೆ: ಎಲ್ಲ ಸಮುದಾಯಗಳ ಹಿತ ಕಾಯುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಬಾಬು ಜಗಜೀವನರಾಮ್ ಅವರ ಮೊಮ್ಮಗ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಡಾ.ಅನ್ಸುಲ್ ಅವಿಜಿತ್ ತಿಳಿಸಿದರು.

ಪಟ್ಟಣದ ಹ್ಯಾಂಡ್‌ಪೋಸ್ಟ್‌ನ ಖಾಸಗಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಾದಿಗ ಸಮುದಾಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರ ಸಭೆ ಉದ್ಘಾಟಿಸಿ ಮಾತಾನಾಡಿದರು.

ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದಿಂದ ದಲಿತ ಸಮುದಾಯ ನೆಮ್ಮದಿ ಜೀವನ ನಡೆಸಿಕೊಂಡು ಬಂದಿತ್ತು. ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಕೋಮುಗಲಭೆ ಭ್ರಷ್ಟಾಚಾರ ಇವುಗಳಿಂದಾಗಿ ಎಲ್ಲ ಸಮುದಾಯಗಳು ಜೀವನ ನಡೆಸುವುದೇ ಕಷ್ಟವಾಗಿದೆ. ರಾಜ್ಯ ಮತ್ತು ಕ್ಷೇತ್ರದಲ್ಲಿ ಬಿಜೆಪಿಯನ್ನು ಕಿತ್ತೊಗೆಯುವ ಕೆಲಸವನ್ನು ಮಾದಿಗ ಸಮುದಾಯ ಮಾಡಬೇಕು ಎಂದರು.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಪ್ರಣಾಳಿಕೆಗಳು ಪ್ರತಿಯೊಂದು ವರ್ಗಗಳ ಕುಟುಂಬಗಳ ಏಳಿಗೆ ಮತ್ತು ರಾಜ್ಯ ಅಭಿವೃದ್ಧಿಗೆ ಪೂರಕವಾಗಿದೆ. ದೇಶದಲ್ಲಿ ಬಾಬು ಜಗಜೀವನರಾಮ್ ಅವರು ನಡೆಸಿದ ಆಡಳಿತ, ಹಸಿರು ಕ್ರಾಂತಿಗೆ ಕಾಂಗ್ರೆಸ್ ಪಕ್ಷವೇ ಬೆಂಬಲವಾಗಿತ್ತು. ಇಂತಹ ಪಕ್ಷದಲ್ಲಿ ನಮ್ಮಂತ ಸಮುದಾಯದ ಅನೇಕ ಮಹನೀಯರು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ತಾಲೂಕಿನಲ್ಲಿ ದಲಿತ ಸಮುದಾಯಗಳು ವಾಸಿಸುತ್ತಿರುವ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಸಮುದಾಯದ ಏಳಿಗೆಗೆ ಶಾಸಕ ಅನಿಲ್ ಚಿಕ್ಕಮಾದು ಹೆಚ್ಚು ಒತ್ತು ನೀಡಿ ಯಾವುದೇ ಕೋಮುಗಲಭೆ ನಡೆಯದಂತೆ ಅಶಾಂತಿಗೆ ಅವಕಾಶ ಕೊಡದೆ ಉತ್ತಮವಾದಂತಹ ಆಡಳಿತ ನಡೆಸಿದ್ದಾರೆ. ಇಂಥವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಕ್ಷೇತ್ರ ಮತ್ತು ಸಮುದಾಯಗಳು ಉಳಿಯಲು ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ತಿಮ್ಮಯ್ಯ ಮಾತನಾಡಿದರು. ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಮಾದಪ್ಪ, ನಂದಿನಿ ಚಂದ್ರಶೇಖರ್, ಶಿವಪ್ಪ ಕೋಟೆ, ಕ್ಯಾತನಳ್ಳಿ ನಾಗರಾಜು, ಜಿನ್ನಳ್ಳಿ ರಾಜನಾಯಕ, ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ ನಾಗರಾಜು, ಡಿಸಿಸಿ ಸದಸ್ಯ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಕೃಷ್ಣಾಪುರ ಪರಶಿವಮೂರ್ತಿ, ಪುರಸಭೆ ಸದಸ್ಯರಾದ ಶಾಂತಮ್ಮ, ಗೋವಿಂದರಾಜು, ಮಹೇಂದ್ರ, ಬೆಟ್ಟಸ್ವಾಮಿ, ಚೆಲುವರಾಜು, ರಾಜೇಂದ್ರ, ಮಹಾದೇವ, ವೈಕುಂಠಯ್ಯ, ನಾಗಯ್ಯ, ಚಾಮರಾಜು, ದೇವನಾಥ್, ವೆಂಕಟೇಶ್, ಪಟೇಲ ಸೋಮು, ಶಿವರಾಜ್, ನಾಗರಾಜು, ಸ್ವಾಮಿ, ರಾಜು, ಹೋಂ ಗಾರ್ಡ್ ಮಾದೇವ, ಸತೀಶ, ವೆಂಕಟಯ್ಯ, ತಿಮ್ಮರಾಜು, ಶಶಿ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.