ಜಿಲ್ಲೆ

ರಾಜ್ಯದಲ್ಲಿ ಐದು ಕೋಟಿ ಸಸಿ ನೆಡುವಿಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ವನ ಮಹೋತ್ಸವ ಅಂಗವಾಗಿ ಬೀದರ್ ಸೇರಿದಂತೆ ರಾಜ್ಯದಲ್ಲಿ ಒಟ್ಟು ಐದು ಕೋಟಿ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದು ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ನೌಬಾದ್ ಸಮೀಪದ ಔದುಂಬರಲಿಂಗ ಮಲ್ಲಿನಾಥ ಆಶ್ರಮದಲ್ಲಿ ಆಯೋಜಿಸಿದ್ದ ವನ ಮಹೋತ್ಸವಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಅವರು ಮಾತನಾಡಿದರು. ಶುದ್ಧ ಗಾಳಿಗಾಗಿ ಎಲ್ಲರೂ ಸಸಿಗಳನ್ನು ನೆಡಬೇಕು. ಪ್ರಕೃತಿಯನ್ನು ರಕ್ಷಿಸಬೇಕು ಎಂದರು.
ಹವಾ ಮಲ್ಲಿನಾಥ ಮಹಾರಾಜರು ಮಠಗಳ ಮೂಲಕ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮರ, ಗಿಡಗಳನ್ನು ಬೆಳೆಸಿ ಪರಿಸರ ಕಾಳಜಿಯನ್ನೂ ತೋರಿದ್ದಾರೆ ಎಂದು ಶ್ಲಾಘಿಸಿದರು.
ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯವಾಗಿದೆ. ಪ್ರತಿಯೊಬ್ಬರೂ ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಸಾನಿಧ್ಯ ವಹಿಸಿದ್ದ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಹೇಳಿದರು.
ಹವಾ ಮಲ್ಲಿನಾಥ ಮಹಾರಾಜರ ಸಾಮಾಜಿಕ ಕಾರ್ಯಗಳು ಅನುಕರಣೀಯವಾಗಿವೆ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ನುಡಿದರು.
ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ಪೌರಾಡಳಿತ ಸಚಿವ ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ, ಅಲ್ಲಮಪ್ರಭುಲಿಂಗೇಶ್ವರ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಪ್ರಮುಖರಾದ ಮಾರುತಿ ಬೌದ್ಧೆ, ಪ್ರಕಾಶ ಶಂಭು, ವಿಜಯಕುಮಾರ ಪಾಟೀಲ, ವೈಜಿನಾಥ ಝಳಕೆ, ಗುರುಸಿದ್ದಪ್ಪ, ದಿಲೀಪ್ ಪಾಟೀಲ, ಶಿವಕುಮಾರ ಮದನೂರು, ಆಕಾಶ ಜನವಾಡ, ಶಿವಕುಮಾರ, ಸಂಗಮೇಶ್ವರ, ಆನಂದ, ನಂದೇಶಕುಮಾರ, ಮಾಣಿಕ, ವಿಶ್ವ, ಮಲ್ಲಿಕಾರ್ಜುನ, ರಿಷಿಕುಮಾರ, ವೀರಶೆಟ್ಟಿ, ಸಾಗರ ತರನಳ್ಳಿ, ವಿಷ್ಣುಕಾಂತ, ಗುರು ಕುದರೆ, ವಿಲಾಸ್, ಅಜಯ ಸಿಂಧೆ, ಸುಮೀತ್ ಇದ್ದರು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಸ್ವಾಗತಿಸಿದರು. ದೀಪಕ್ ಥಮಕೆ ನಿರೂಪಿಸಿದರು.