ಜಿಲ್ಲೆ

ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ

ಬಾಗಲಕೋಟೆ: ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಅಽಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಕೊಡುಗೆ ಶೂನ್ಯವಾಗಿದೆ. ದಲಿತ, ಒಬಿಸಿ, ರೈತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಸಂಪೂರ್ಣ ವಿ-Àಲವಾಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹಣ ಕೇಳಿದರು ಕೊಡುವ ಶಕ್ತಿ ಸರ್ಕಾರಕ್ಕೆ ಇಲ್ಲವಾಗಿದೆ. ಜನರ ಹಣವನ್ನು ದೋಚಿ ಗ್ಯಾರಂಟಿಗಳನ್ನು ನೀಡಿದೆ. ಇದನ್ನೆ ದೊಡ್ಡ ಸಾಧನೆ ಅಂತ ಬಿಂಬಿಸಿದೆ. ಬೆಲೆ ಏರಿಕೆ ಕೂಡಾ ಕಾಂಗ್ರೆಸ್ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ವಾಣಿಜ್ಯ ವಿದ್ಯುತ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸಣ್ಣ ಉದ್ಯಮ ಕೈಗಾರಿಕೆಗಳಿಗೆ ವಾಣಿಜ್ಯೋದ್ಯಮಿಗಳು ನಷ್ಟ ಅನುಭವಿಸಿ ದಿವಾಳಿ ಆಗಿದ್ದಾರೆ. ಆಸ್ತಿ, ವಾಹನ ದರ, ಮದ್ಯದ ದರ, ಒಡಂಬಡಿಕೆ ಪತ್ರಗಳ ಶುಲ್ಕ ದುಬಾರಿ, ಅಬಕಾರಿ ಸೋಂಕು ಏರಿಕೆ ಇನ್ನು ಹಲವಾರು ಲೋಪದೋಷದ ತೆರಿಗೆ ಜನರಿಗೆ ಹೊರೆ ಮಾಡಿವೆ. ಅತೀ ಹೆಚ್ಚು ಸಾರಿ ಬಜೆಟ್ ಮಂಡಿಸಿದ್ದ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ವಿಷಯದಲ್ಲಿ ಹಿನ್ನಡೆ ಮಾಡಿದ್ದಾರೆ ಎಂದು ಹೇಳಿದರು.

ರೈತರಿಗೆ ಬರಗಾಲ ಪರಿಹಾರ ನೀಡಿಲ್ಲ. ಉದ್ಯಮಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಕುಳಿತು ಕಾಲ ಹರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಟಿಕರಣ ಮಾಡಲಾಗುತ್ತಿದೆ. ಎಸ್ಸಿ,ಎಸ್ಟಿ ೨೦ ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಕೆ ಮಾಡಿದ್ದಾರೆ. ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ. ಮಹಾದಾಯಿ, ಮೇಕೆದಾಟು ಯೋಜನೆ ಚಕಾರ್ ಎತ್ತುತ್ತಿಲ್ಲ. ಈ ಹಿಂದಿನ ಯುಪಿಎ ಅವಽಗ್ಗಿಂತ ೨೦೦ ಪಟ್ಟು ಹೆಚ್ಚು ಅನುದಾನ ಮೋದಿ ಸರ್ಕಾರ ರಾಜ್ಯಕ್ಕೆ ನೀಡಿದೆ. ಆದರು ಜನರಿಗೆ ಸುಳ್ಳು ಹೇಳಿ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ರೈತರ ಹಾಲಿನ ಮೇಲೆ ನೀಡುವ ೭೦೦ ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಇದೆ. ಶೈಕ್ಷಣಿಕ ರಂಗದಲ್ಲಂತು ಸರ್ಕಾರ ಬಹುದೊಡ್ಡ ಹಿನ್ನಡೆ ಮಾಡಿದೆ. ಕನ್ನಡ ಸರಿಯಾಗಿ ಬಾರದ ಶಿಕ್ಷಣ ಮಂತ್ರಿ ಇದ್ದಾರೆ ಎನ್ನುವುದೇ ದುರಂತ ಸಂಗತಿ. ರಾಷ್ಟ್ರೀಯ ಶಿಕ್ಷಣ ನೀತಿ ವಿಷಯದಲ್ಲಿ ವಂಚನೆ ಮಾಡಿದ್ದಾರೆ. ಕಳೆದ ಎಸ್ಸೆಸ್ಸೆಲ್ಸಿ, ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷಗಳು ಇದಕ್ಕೆ ಸಾಕ್ಷಿ ಎಂದು ಟೀಕಿಸಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಹುನಗುಂದ, ವಕ್ತಾರ ಸತ್ಯ ನಾರಾಯಣ ಹೇಮಾದ್ರಿ ಇತರರು ಇದ್ದರು.