ಜಿಲ್ಲೆ

ರಾಜ್ಯದ 13 ಜಿಲ್ಲೆಗಳಲ್ಲಿ ಈಶ ಗ್ರಾಮೋತ್ಸವ

ಮೈಸೂರು: ದಕ್ಷಿಣದ ರಾಜ್ಯಗಳು ಮತ್ತು ಕರ್ನಾಟಕದ 13 ಜಿಲ್ಲೆಗಳ 1,300 ಹಳ್ಳಿಗಳಲ್ಲಿ ಈಶ ಗ್ರಾಮೋತ್ಸವ ನಡೆಯಲಿದೆ.


ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ, ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಈಶ ಫೌಂಡೇಷನ್‌ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್‌ರೀಚ್ ಆಗಸ್ಟ್‌ನಿಂದ ಸೆಪ್ಟೆಂಬರ್ 23 ರವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿಯಲ್ಲಿ ನಡೆಸಲಾಗುತ್ತದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಎದುರು ಅಂತಿಮ ಪಂದ್ಯಗಳು ನಡೆಯಲಿವೆ.


ಕರ್ನಾಟಕದಲ್ಲಿ ಕ್ಲಸ್ಟರ್ ಮಟ್ಟದ ವಾಲಿಬಾಲ್, ಕಬಡ್ಡಿ, ಥ್ರೋಬಾಲ್ ಪಂದ್ಯಗಳು ಆ.12ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 3ರಂದು ವಿಜೇತ ತಂಡಗಳು ವಿಭಾಗ ಮಟ್ಟದ ಪಂದ್ಯವನ್ನು ಆಡಲಿವೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಶಿವಮೊಗ್ಗ ಸೇರಿದಂತೆ 13 ಜಿಲ್ಲೆಗಳ 3,200ಕ್ಕೂ ಹೆಚ್ಚು ಹಳ್ಳಿಗಳು ಕಾರ್ಯಕ್ರಮ ನಡೆಯಲಿದ್ದು, ನೋಂದಣಿ ಉಚಿತವಾಗಿದೆ.


ಮೊದಲ ಹಂತದ (ಕ್ಲಸ್ಟರ್) ಪಂದ್ಯಗಳು-ಆ.12 ಹಾಗೂ 13ರಂದು ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ, ವಿಜಯನಗರ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ, ಆ.19 ಹಾಗೂ 20 ರಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ, ಆ.26 ಹಾಗೂ 27ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಲಿವೆ.


2ನೇ ಹಂತದ (ವಿಭಾಗ) ಪಂದ್ಯಗಳು ಸೆಪ್ಟೆಂಬರ್ 3ರಂದು ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ನಡೆಯಲಿವೆ. ಫೈನಲ್ ಹಂತದ ಪಂದ್ಯಗಳು ಸೆಪ್ಟೆಂಬರ್ 23ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿವೆ. ಮಾಹಿತಿಗಾಗಿ ಮೊ: 83000 30999 ಸಂಪರ್ಕಿಸಬಹುದು.