ಚಾಮರಾಜನಗರ: ಚಾ.ನಗರ ವೈದ್ಯಕೀಯ ಕಾಲೇಜು ಹೊಸದಾಗಿದ್ದರೂ, ಹೊಸ ವೈದ್ಯಕೀಯ ಮತ್ತು ತಂತ್ರಜ್ಞಾನ ವಿಧಾನಗಳನ್ನು ಬಳಕೆ ಮಾಡಿಕೊಂಡು ರಾಜ್ಯಕ್ಕೆ ಸಿಮ್ಸ್ ಕಾಲೇಜಿನ ಹಿರಿಮೆಯನ್ನು ಸಾರುತ್ತಿದೆ ಎಂದು ಸಿಮ್ಸ್ ಡೀನ್ ಮತ್ತು ನಿರ್ದೇಶಕರಾದ ಡಾ.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆ, ಕರ್ನಾಟಕ ಮೆಡಿಕಲ್ ಕೌನ್ಸಿಲ್, ರಾಜೀವ್ ಗಾಂಧಿ ಮೂನಿವರ್ಸಿಟಿ, ಬೆಂಗಳೂರು ಆಥೋಪೆಡಿಕ್ ಸೊಸೈಟಿ, ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಟ್ರಸ್ಟ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಸಿಮ್ಸ್ ಟೀಚರ್ಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಟ್ರಾನ್ಸ್‌ಪೋರೋಮಿನಲ್ ಆ್ಯಂಡ್ ಇಂಟರ್ ಲ್ಯಾಮಿನರ್ ಎಂಡೋಸ್ಕೋಪಿ ಶಸಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗ ಹಲವಾರು ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ವಿಭಾಗದ ಮುಖ್ಯಸ್ಥ ಡಾ.ಮಾರುತಿ ಮತ್ತು ವೈದ್ಯರು ಹಾಗೂ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಾಗಾರದ ಮೂಲಕ ರಾಜ್ಯದಲ್ಲೇ ಸಿಮ್ಸ್ ಆಸ್ಪತ್ರೆಯನ್ನು ಒಂದು ಹೆಜ್ಜೆ ಮೇಲಕ್ಕೆ ಕೊಂಡೊಯ್ದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ವೆಂಕಟೇಶ್ ಮತ್ತು ಸಮಾಜ ಸೇವಕ ರಾಜಣ್ಣ ಅವರನ್ನು ಸನ್ಮಾನಿಸಲಾಯಿತು. ‘
ಈ ಸಂದರ್ಭದಲ್ಲಿ ಸಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಡಾ.ಗಿರೀಶ್ ಪಟೇಲ್, ಡಾ.ಪದ್ಮಾಕ್ಷ, ಡಾ.ಎಚ್.ಬಿ.ಶೋಭಾ, ಮೈಸೂರು ಮೆಡಿಕಲ್ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಸುಜನ್ ತೇಜಾ, ಡಾ.ಪುರುಷೋತ್ತಮ್, ಡಾ.ಮಲ್ಲಿಕಾರ್ಜುನಸ್ವಾಮಿ, ಡಾ.ಮುತ್ತಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಡಾ.ರಾಘವೇಂದ್ರ ಇತರರು ಹಾಜರಿದ್ದರು.
ಸಿಮ್ಸ್ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಎಂಡೋಸ್ಕೋಪಿ ಮೂಲಕ ಪ್ರೊಲ್ಯಾಪ್ ಡಿಸ್ಕ್ ಶಸಚಿಕಿತ್ಸೆ ಕಾರ್ಯಾಗಾರ ಆಯೋಜಿಸಲಾಗಿತ್ತು. 4 ದಿಗ್ಗಜರು ಯಶಸ್ವಿಯಾಗಿ ಶಸಚಿಕಿತ್ಸೆ ನಡೆಸಿದರು. ಈ ಮೂಲಕ ಸಿಮ್ಸ್ ಆರೋಗ್ಯ ಸೇವೆಯನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ.
ಡಾ.ಮಾರುತಿ, ಮುಖ್ಯಸ್ಥ, ಕೀಲು ಮತ್ತು ಮೂಳೆ ವಿಭಾಗ, ಸಿಮ್ಸ್ ಆಸ್ಪತ್ರೆ ಚಾಮರಾಜನಗರ