ಜಿಲ್ಲೆ

ರಾಜ್ಯಕ್ಕೆ ಸಹನಾ 2ನೇ ಟಾಪರ್​: 28ನೇ ಸ್ಥಾನದಲ್ಲಿ ಶಿಕ್ಷಣ ಸಚಿವರ ತವರು

ತುಮಕೂರು: ಶೈಕ್ಷಣಿಕ ಜಿಲ್ಲೆ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ತವರು ತುಮಕೂರು ಜಿಲ್ಲೆ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.58.90 ಲಿತಾಂಶ ಗಳಿಸಿದ್ದು, 28ನೇ ಸ್ಥಾನದಲ್ಲಿದೆ.

ನಗರದ ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಟಿ.ಆರ್​.ಸಹನಾ (595/600) ರಾಜ್ಯಕ್ಕೆ 2ನೇ ಟಾಪರ್​ ಆಗಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾವಾಹಿನಿ ಕಾಲೇಜಿನ ಎ.ಮುಕ್ತ 594 ಅಂಕಗಳಿಸಿ ರಾಜ್ಯಕ್ಕೆ ತೃತೀಯ, ಜಿಲ್ಲೆಗೆ ದ್ವೀತಿಯ ಸ್ಥಾನಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾನಿಧಿ ಕಾಲೇಜಿನ ಎಚ್​.ಎಲ್​.ಹರ್ಷಿಣಿ 595 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನಗಳಿಸಿ ಜಿಲ್ಲೆಗೆ ಪ್ರಥಮ ಎನಿಸಿದ್ದಾರೆ.

2020ರಲ್ಲಿ ಶೇ.62.26 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 28ನೇ ಸ್ಥಾನಗಳಿಸಿದ್ದ ಜಿಲ್ಲೆ ಈ ವರ್ಷ ಶೇ.3.36 ಕುಸಿತ ಕಂಡಿದೆಯಾದರೂ ಅದೇ ಸ್ಥಾನ ಉಳಿಸಿಕೊಂಡಿದೆ. ಶೇ.58.90 ಫಲಿತಾಂಶ ದಾಖಲಾಗಿದೆ. ಏಪ್ರಿಲ್​&ಮೇನಲ್ಲಿ ನಡೆದ ದ್ವೀತಿಯ ಪಿಯು ಪರೀಕ್ಷೆಯಲ್ಲಿ ಕಲಾ, ವಿಾನ ಮತ್ತು ವಾಣಿಜ್ಯ ವಿಭಾಗದ ಪುನರಾವರ್ತಿತ (2152), ಖಾಸಗಿಯಾಗಿ (546) ಪರೀಕ್ಷೆ ತೆಗೆದುಕೊಂಡಿದ್ದವರೂ ಸೇರಿ ಒಟ್ಟು 28,008 ವಿದ್ಯಾರ್ಥಿಗಳು ಪರೀೆ ಬರೆದಿದ್ದರು. ಇವರಲ್ಲಿ 15,483 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಪದವಿ ಪೂರ್ವ ಶಿಣ ಇಲಾಖೆ ಉಪನಿರ್ದೇಶಕಿ ಗಂಗಾಧರ್​ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರೇ ಮೇಲುಗೈ: ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ಒಟ್ಟು 28,008 ವಿದ್ಯಾರ್ಥಿಗಳಲ್ಲಿ 13,573 ಬಾಲಕರಲ್ಲಿ 6,515 ಮಂದಿ (ಶೇ.48) ತೇರ್ಗಡೆ ಹೊಂದಿದ್ದಾರೆ. ಇನ್ನು 14,435 ವಿದ್ಯಾರ್ಥಿನಿಯರಲ್ಲಿ 8,968 (ಶೇ.62.13) ಮಂದಿ ಪಾಸಾಗಿದ್ದಾರೆ.

ನಗರ ಪ್ರದೇಶದ 20,198 ವಿದ್ಯಾರ್ಥಿಗಳಲ್ಲಿ 11,248 (ಶೇ 55.69), ಗ್ರಾಮೀಣ ಪ್ರದೇಶದ 7,810 ವಿದ್ಯಾರ್ಥಿಗಳಲ್ಲಿ 4,235 (ಶೇ 54.23) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳು ಕೊಂಚ ಮೇಲುಗೈ ಸಾಧಿಸಿದ್ದಾರೆ.

ಕಲಾ ವಿಭಾಗದಲ್ಲಿ ಪರೀೆ ಬರೆದ 8,124 ವಿದ್ಯಾರ್ಥಿಗಳಲ್ಲಿ 3,360 (ಶೇ 41.36), ವಿಾನ ವಿಭಾಗದಲ್ಲಿ ಪರೀೆ ಬರೆದ 8,717 ರಲ್ಲಿ 5,571(ಶೇ 63.91), ವಾಣಿಜ್ಯ ವಿಭಾಗದಲ್ಲಿ ಪರೀೆ ಬರೆದ 11,167 ವಿದ್ಯಾರ್ಥಿಗಳಲ್ಲಿ 6,552 (ಶೇ 58.67) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ರಾಜ್ಯಕ್ಕೆ ಸೆಕೆಂಡ್​ ಟಾಪರ್​: ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಟಿ.ಆರ್​.ಸಹನಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 595 ಅಂಕಗಳಿಸಿ ರಾಜ್ಯಕ್ಕೆ ಸೆಕೆಂಡ್​ ಟಾಪರ್​ ಎನಿಸಿದ್ದಾರೆ. ಕನ್ನಡ&100, ಇಂಗ್ಲೀಷ್​&95, ಬ್ಯುಸಿನೆಸ್​ ಸ್ಟಡಿಸ್​&100, ಅಕೌಂಟೆನ್ಸಿ&100, ಕಂಪ್ಯೂಟರ್​ಸೈನ್ಸ್​&100 ಹಾಗೂ ಅರ್ಥಶಾಸ&100 ಅಂಕಗಳನ್ನು ಪಡೆದು ಟಾಪ್​&10ರಲ್ಲಿ ಸ್ಥಾನ ಪಡೆದಿರುವುದು ವಿಶೇಷ ಎನಿಸಿದೆ.

ಅದೇ ಶಿಕ್ಷಣ ಸಂಸ್ಥೆಯ ವಿದ್ಯಾವಾಹಿನಿ ಕಾಲೇಜಿನ ಎ.ಮುಕ್ತ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿದ್ದು ಕನ್ನಡ&100, ಇಂಗ್ಲೀಷ್​&94, ಬ್ಯುಸಿನೆಸ್​ ಸ್ಟಡಿಸ್​&100, ಅಕೌಂಟೆನ್ಸಿ&100, ಸಂಖ್ಯಾಶಾಸ&100 ಹಾಗೂ ಅರ್ಥಶಾಸದಲ್ಲಿ&100 ಅಂಕ ಪಡೆದಿದ್ದಾರೆ.

ವಿಜ್ಞಾನದಲ್ಲಿ ನಾಲ್ಕನೇ ಸ್ಥಾನ: ವಿದ್ಯಾನಿಧಿ ಕಾಲೇಜಿನ ಎಚ್​.ಎಲ್​.ಹರ್ಷಿಣಿ (595/600) ರಾಜ್ಯಕ್ಕೆ ನಾಲ್ಕನೇ ಸ್ಥಾನಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕನ್ನಡ&100, ಇಂಗ್ಲೀಷ್​&97, ಭೌತಶಾಸ&100, ರಸಾಯನಶಾಸ&100, ಗಣಿತ&100, ಜೀವಶಾಸ&98 ಅಂಕಗಳಿಸಿದ್ದಾರೆ. ರಾಜ್ಯದ ಟಾಪ್​ 13ರಲ್ಲಿ ಸ್ಥಾನಗಿಟ್ಟಿಸಿಕೊಳ್ಳಲಾಗಿಲ್ಲ. ವಿದ್ಯಾವಾಹಿನಿ ಕಾಲೇಜಿನ ಯಶಸ್ವಿನಿ (590/600) ಅಂಕಗಳಿಸಿ ಉತ್ತಮ ಸಾಧನೆಗೈದಿದ್ದಾರೆ.