ಜಿಲ್ಲೆ

ರಾಜ್ಯಕ್ಕೆ ಶಕ್ತಿಕೇಂದ್ರವಾಗಲಿದೆ ಸೋಲೂರು ಸಂಸ್ಥಾನ : ಸಚಿವ ಸುನೀಲ್ ಕುಮಾರ್ ಹೇಳಿಕೆ

ಮಾಗಡಿ: ರಾಜ್ಯದ ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಿ ಆ ಮೂಲಕ ಸಮಾಜದ ಏಳಿಗೆಗೆ ವಿಶೇಷ ಪ್ರಯತ್ನ ಮಾಡುವ ಹಿನ್ನೆಲೆಯಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ನೇತೃತ್ವದಲ್ಲಿ ಶ್ರೀಗಳ ಪಟ್ಟಾಭಿಷೇಕ ನಡೆಸಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ತಾಲೂಕಿನ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದಲ್ಲಿ ಬುಧವಾರ ನಡೆದ ಶ್ರೀಗಳ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಯ ಈಡಿಗ ಸವಾಜ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಹಿಂದುಳಿದ ಸವಾಜಗಳನ್ನು ಮಠದ ಅಡಿಯಲ್ಲಿ ತಂದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಅಭಿವೃದ್ಧಿಪಡಿಸಲು ಸವಾನ ಮನಸ್ಕರು ಒಂದಾಗಿ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮ ಮಾಡಲಾಗಿದೆ. ಈ ಕೇಂದ್ರ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಶಕ್ತಿ ಕೇಂದ್ರವಾಗಲಿದೆ. ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿಯಾಗುವಂತಹ ಮಠ ಇದಾಗಲಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನೂತನ ಶ್ರೀವಿಖ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಇಡೀ ಕೆಳವರ್ಗದ ಸವಾಜ ಸಂಟನಾತ್ಮಕವಾಗಿ ಚಟುವಟಿಕೆಗಳನ್ನು ನಡೆಸುವ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವ ಜತೆಗೆ ಧ್ವನಿ ಮತ್ತು ಭಾವನೆಗಳನ್ನು ಭಾಷೆ ಮೂಲಕ ಹೇಳಲಾಗದವರಿಗೆ ಸಾವಾಜಿಕ ನ್ಯಾಯ ಕೊಡಿಸಲಾಗುವುದು ಎಂದರು.

ನೂತನ ಪೀಠಾಧ್ಯಕ್ಷ ಶ್ರೀ ವಿಖ್ಯಾನಂದ ಸ್ವಾಮೀಜಿ ವಾತನಾಡಿ, ಸಮಾಜದ ಎಲ್ಲ ಪಂಗಡಗಳನ್ನು ಒಗ್ಗೂಡಿಸಿ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಕಲ್ಪಿಸಿ ಸುಸಂಸ್ಕೃತ ಸಮಾಜ ಕಟ್ಟುವ ಸಂಕಲ್ಪ ತೊಟ್ಟಿದ್ದೇವೆ. ಸವಾಜದಲ್ಲಿ ಸಾಹಿತಿಗಳು, ಉನ್ನತ ವಿದ್ಯಾರ್ಥಿಗಳು, ಪ್ರಜ್ಞಾವಂತವರಿದ್ದಾಗ ಉತ್ತಮ ಸವಾಜ ನಿರ್ವಾಣ ಸಾಧ್ಯ. ಈ ನಿಟ್ಟಿನಲ್ಲಿ ಸವಾಜ ಮುನ್ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಗುರುನಾರಾಯಣ್ ಅವರು ಒಂದೇ ಜಾತಿ, ಮತ, ದೇವರು ಎಂದಿದ್ದರು. ಅದರ ಮೂಲಕ ಸಂಟಿತರಾಗಿ ಹಕ್ಕು, ಸಮಬಾಳಿಗೆ ಹೋರಾಟ ವಾಡಲು ಮನಸ್ಥಿತಿ ತಯಾರು ಮಾಡುವ ಕೆಲಸ ಮಾಡಿದ್ದರು. ಆ ನಿಟ್ಟಿನಲ್ಲಿ ಶ್ರೀಗಳು ಕೆಲಸ ಮಾಡುತ್ತಾರೆ, ಸವಾಜದ ಏಳಿಗೆಗೆ ಶ್ರಮಿಸಲಿದ್ದಾರೆ ಎಂಬ ಆಶಯವಿದೆ ಎಂದರು.

ಶಾಸಕ ಎ. ಮಂಜುನಾಥ್, ಸವಾಜದ ರಾಜ್ಯಾಧ್ಯಕ್ಷ ಡಾ. ಎಂ.ತಿಮ್ಮೇಗೌಡ, ವಾರ್ಕಳ ಶಿವಗಿರಿ ಮಠದ ಪದ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಸಿಂಗದೂರು ಚೌಡೇಶ್ವರಿ ಧರ್ಮದರ್ಶಿ ರಾಮಪ್ಪ, ಟ್ರಸ್ಟಿಗಳಾದ ಜೆ.ಪಿ. ಸುಧಾಕರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನಿರ್ದೆಶಕ ದುಷ್ಯಂತ್, ಬಿಲ್ಲವ ಸಂದ ರಾಜ್ಯಾಧ್ಯಕ್ಷ ವೇದಕುವಾರ್, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ, ವಕೀಲ ರಕ್ಷಿತ್, ತಾಲೂಕು ಉಪಾಧ್ಯಕ್ಷ ಕೆ.ವಿ.ವೆಂಕಟೇಶ್, ಶಶಾಂಕ್, ಇದ್ದರು.

ಕಳಪೆ ಕಾಮಗಾರಿ, ಶಿಸ್ತುಕ್ರಮ: ಚನ್ನಪಟ್ಟಣದ ಅಂಬೇಡ್ಕರ್ ಭವನ ಕಾಮಗಾರಿ ಕಳಪೆಯಾಗಿದೆ ಎಂದು ವಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೋಪದೋಷಗಳಿದ್ದರೆ ಸರಿಪಡಿಸಿ ಕಳಪೆ ಕಾಮಗಾರಿ ಮಾಡಿದವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಪಾರದರ್ಶಕತೆ ತರಲು ಒತ್ತು ನೀಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಕ್ಷ ಗಟ್ಟಿಯಾಗಿದೆ: ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದವರು ಎಂದೂ ಬಜೆಟ್ ಅನ್ನು ಸ್ವಾಗತಿಸಿರುವ ಉದಾಹರಣೆಗಳಿಲ್ಲ. ಅನಿವಾರ್ಯವಾಗಿ ವಿರೋಧ ವಾಡುತ್ತಾರೆ. 25 ವರ್ಷಗಳ ನಂತರ ಕೇಂದ್ರ ಸರ್ಕಾರ ಪ್ರಗತಿಪರ, ದೂರದೃಷ್ಟಿಯುಳ್ಳ ಬಜೆಟ್ ಮಂಡಿಸಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬಿಜೆಪಿ ಸಂಟನೆಯಲ್ಲಿ ಲೋಪದೋಷಗಳನ್ನು ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತಾತ್ಮಕ ಲೋಪದೋಷಗಳನ್ನು ನಿವಾರಿಸಿ ವ್ಯವಸ್ಥಿತ, ಉತ್ತಮ ಪ್ರಗತಿಪರ, ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಪಕ್ಷ ಗಟ್ಟಿಯಾಗಿದೆ, ಒಳ್ಳೆಯ ಆಡಳಿತ ನೀಡುತ್ತಿದೆ. ಬಿಜೆಪಿಯ ಶಾಸಕರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮಲ್ಲಿ ಗೊಂದಲವೂ ಇಲ್ಲ. ಕೋವಿಡ್ ಮಧ್ಯೆಯೂ ಗುಣಾತ್ಮಕ ಆಡಳಿತ ಹೆಗ್ಗಳಿಕೆ ಬೊವ್ಮಾಯಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.