೬೧೩ ಅಗ್ರ, ೩೬೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ | ಸ್ಟೇಟ್‌ನಲ್ಲಿ ಮಿಂಚಿದ ಸಮರ್ಥ, ಬನಶಂಕರಿ ಸಾಧನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶರಣಬಸವೇಶ್ವರ ಸಂಯುಕ್ತ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಮರ್ಥ ಭಕರೆ ೫೯೫ ಅಂಕದೊAದಿಗೆ ರಾಜ್ಯ ಮಟ್ಟದಲ್ಲಿ ೪ನೇ ರ‍್ಯಾಂಕ್ ಮತ್ತು ೫೯೦ ಅಂಕದೊAದಿಗೆ ಬನಶಂಕರಿ ೯ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ೬೧೩ ವಿದ್ಯಾರ್ಥಿಗಳು ಅಗ್ರಶ್ರೇಣಿ, ೩೬೬ ಪ್ರಥಮ ಶ್ರೇಣಿ, ೧೨ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.೯೫ಕ್ಕಿಂತ ಹೆಚ್ಚು ೮೨, ಶೇ.೯೦-೯೫ ಅಂಕ ೩೧೯, ಶೇ.೮೫-೯೦ ಅಂಕ ೨೧೨, ಶೇ.೮೦-೮೫ ಅಂಕ ೧೭೬, ಶೇ.೭೦-೮೦ ಅಂಕ ೧೪೦, ಶೇ.೬೦-೭೦ ಅಂಕ ೭೦ ವಿದ್ಯಾರ್ಥಿಗಳು ಪಡೆದಿದ್ದಾರೆ.
ಸ್ನೇಹಾ ಬಿ.ಕೆ. ೫೮೮ ಅಂಕ ಪಡೆದು ಕಾಲೇಜಿಗೆ ತೃತೀಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಭಾಗ್ಯಶ್ರೀ ಎಂ., ವಿನಯಕುಮಾರ ಶೇ.೯೭.೮೩, ಸುಷ್ಮಿತಾ ಎಸ್. ಶೇ.೯೭.೬೭, ರವಿನಾ, ಪವನ ಪೋದ್ದಾರ, ಶ್ರೀಶೈಲ ಆರ್., ನಿಖಿತಾ ಬಸರಡ್ಡಿ, ದಿವಾಕರ ಹೊಟ್ಟಿ, ಪಂಚಾಕ್ಷರಿ ರಾಜಶೇಖರ, ಮೇಘನಾ ಬಸವರಾಜ, ಸಂಧ್ಯಾ ಪಾಟೀಲ್ ಶೇ.೯೭.೩೩ ಹಾಗೂ ಶಿವಲೀಲಾ ಎಂ., ಲಕ್ಷಿö್ಮÃ ಕಟ್ಟಿಮನಿ ಶೇ.೯೭.೧೭ ಅಂಕದೊAದಿಗೆ ಅತ್ಯುನ್ನತ ಸಾಧನೆ ಮೆರೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಡಾ.ಶರಣಬಸವಪ್ಪ ಅಪ್ಪ, ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಈ ಫಲಿತಾಂಶ ವಿದ್ಯಾರ್ಥಿಗಳು, ಶಿಕ್ಷಕರ ಪ್ರಾಮಾಣಿಕತೆ ಮತ್ತು ಶ್ರದ್ಧೆ ಫಲವಾಗಿದೆ ಎಂದು ಪ್ರಾಚಾರ್ಯ ಎನ್.ಎಸ್. ದೇವರಕಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೋಟ್
ಎಸ್‌ಬಿಆರ್‌ನಲ್ಲಿ ನಿರಂತರ ಅಭ್ಯಾಸದಿಂದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಗುರುಗಳ ಅಧ್ಯಯನ, ಬೋಧನೆ ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಅತ್ಯುನ್ನತ ಫಲಿತಾಂಶ ಬಂದಿದೆ. ಶರಣರ ಕೃಪೆಯಿಂದ ವಿದ್ಯಾರ್ಥಿಗಳು ನೀಟ್ ಮತ್ತು ಸಿಇಟಿಯಲ್ಲೂ ಉತ್ತಮ ಅಂಕ ಪಡೆದು ಉನ್ನತ ಸಾಧನೆ ಮಾಡಲಿ.
| ಶ್ರೀ ಡಾ.ಶರಣಬಸವಪ್ಪ ಅಪ್ಪ
ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
ಕೋಟ್
ಎಸ್‌ಬಿಆರ್ ಜಿಲ್ಲೆಯಲ್ಲೇ ಆದರ್ಶ ಕಾಲೇಜಾಗಿದ್ದು, ಶ್ರೀ ಡಾ.ಶರಣಬಸವಪ್ಪ ಅಪ್ಪ ಪ್ರಾರಂಭಿಸಿದ ಕಾಲೇಜು ಇಂದು ಬ್ರಾÈಂಡ್ ಆಗಿ ಹೊರಹೊಮ್ಮಿದೆ. ಕಲಿಕೆ ಗುಣಮಟ್ಟ, ವಾತಾವರಣ ಸೃಷ್ಟಿಸಿರುವ ಎಲ್ಲ ಗುರುವೃಂದದವರ ಕೊಡುಗೆ ಅಪಾರ. ವಿದ್ಯಾರ್ಥಿಗಳು ರಾಷ್ಟçಮಟ್ಟದ ನೀಟ್ ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದು ಸಂಸ್ಥೆ ಗೌರವ ಇಮ್ಮಡಿಗೊಳಿಸಲಿ.
| ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ
ಚೇರ್‌ಪರ್ಸನ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
ಕೋಟ್
ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರು-ಶಿಷ್ಯರು ಸಮಯಕ್ಕೆ ತಕ್ಕಂತೆ ಶ್ರಮಿಸುತ್ತಾರೆ. ಪ್ರಾಚಾರ್ಯರ ಮಾರ್ಗದರ್ಶನದಲ್ಲಿ ಎಲ್ಲ ಗುರುವೃಂದದವರು ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ.
| ಬಸವರಾಜ ದೇಶಮುಖ
ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
ಬಾಕ್ಸ್
ಉಪನ್ಯಾಸಕನ ಮಗ ರಾಜ್ಯಕ್ಕೆ ೪ನೇ ಸ್ಥಾನ
ವಿದ್ಯಾರ್ಥಿ ಸಮರ್ಥ ಎಸ್.ಭಕರೆ ೫೯೫ ಅಂಕಗಳೊAದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ. ಆಳಂದ ತಾಲೂಕಿನ ಸರಸಂಬಾ ಮೂಲದ ಸಮರ್ಥ ಅವರ ತಂದೆ ಶಿವರಾಜ, ತಾಯಿ ಅನಿತಾ ಉಪನ್ಯಾಸಕರು. ಜೀವಶಾಸ್ತç, ರಸಾಯನಶಾಸ್ತçದಲ್ಲಿ ೧೦೦, ಇಂಗ್ಲಿಷ್, ಗಣಿತ, ಭೌತಶಾಸ್ತçದಲ್ಲಿ ೯೯ ಕನ್ನಡದಲ್ಲಿ ೯೮ ಅಂಕ ಪಡೆದಿದ್ದು, ಎಂಬಿಬಿಎಸ್ ಗುರಿಯೊಂದಿಗೆ ವಿಶ್ವಾಸದೊಂದಿಗೆ ಅಧ್ಯಯನ ಮಾಡಿz್ದೆÃನೆ. ಪ್ರಾಧ್ಯಾಪಕರ, ಹೆತ್ತವರ ಸಹಕಾರದಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಗಿದೆ ಎನ್ನುತ್ತಾನೆ ಸಮರ್ಥ.