ಜಿಲ್ಲೆ

ರಾಜ್ಯಕ್ಕೆ ಅಪಾರ ಕೊಡುಗೆ

ಅಶೋಕ್ ಕುಮಾರ್ ಎನ್

ಕಾನಹೊಸಹಳ್ಳಿ: ರಾಜ್ಯದ ಬಡವರು, ದಲಿತರು ಮತ್ತು ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲಿಸಿದ ಮಹಾನ್ ನಾಯಕ ದೇವರಾಜ ಅರಸು ಆಗಿದ್ದಾರೆ ಎಂದು ನಾಡ ಕಚೇರಿ ಸಹಾಯಕಿ ಅನೀತಾ ಪೂಜಾರ್ ತಿಳಿಸಿದರು.

ಗ್ರಾಮದ ನಾಡಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಅರಸು ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಆಪಾರವಾಗಿದೆ. ಸಮಾಜವಾದ ಹಾಗೂ ಲೋಹಿಯಾ ಚಿಂತನೆ ಮೈಗೂಡಿಸಿಕೊಂಡು ರಾಜಕೀಯ ಜೀವನ ನಡೆಸಿದರು. ಇಂತಹ ನಾಯಕರ ಚಿಂತನೆಗಳು ಇಂದಿನ ಯುವಪೀಳಿಗೆ ಸ್ಪೂರ್ತಿಯಾಗಬೇಕೆಂದು ತಿಳಿಸಿದರು.

ಗ್ರಾಮಲೆಕ್ಕಾಧಿಕಾರಿ ಅಜೇಯ, ಸಿಬ್ಬಂದಿ ಅಗ್ರಹಾರ ಮಂಜುನಾಥ, ಸಿದ್ದೇಶ್, ಗಂಗಣ್ಣ, ಬೋರಣ್ಣ ಇತರರಿದ್ದರು.