ಚಿತ್ರದುರ್ಗ: ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಅನುದಾನವನ್ನು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಪ್ರದೇ ಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡಲು ಏನಾದರೂ ವಿಶೇಷ ಆಸಕ್ತಿ ತೆಗೆದುಕೊಳ್ಳಲಾಗಿದೆಯೇ ಹಾಗೂ ನಮ್ಮ ರಾಜ್ಯಕ್ಕೆ ಯಾವ ಪ್ರಮಾಣದಲ್ಲಿ ಈ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಅವರು ಸಂಸತ್ತಿ ನಲ್ಲಿ ಸೋಮವಾರ ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕಕ್ಕೆ 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಅಂದಾಜು 7800 ಕೋಟಿ ರೂ.ಹಾಗೂ ಇದೇ ಅವಧಿ ಚಿತ್ರ ದುರ್ಗ ಜಿಲ್ಲೆಗೆ 48.33 ಕೋಟಿ ರೂ.ಅನುದಾನ ಬಳಕೆಯಾಗಿದೆ ಎಂದು ಕೇಂದ್ರದ ಕಾರ್ಪೋರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷಮಲೋತ್ರ ಅವರು ಉತ್ತರಿಸಿದ್ದು,ಜಿಲ್ಲಾವಾರು ಅನುದಾನದ ಹಂಚಿಕೆ ವಿವರವನ್ನು ಒದಗಿಸಿದ್ದಾರೆ.
ಕಂಪನಿಗಳ ಕಾಯ್ದೆ 2013 ಅಡಿಯಲ್ಲಿ ಪ್ರತಿ ಕಂಪನಿ ವಾರ್ಷಿಕವಾಗಿ ಸಿಎಸ್‌ಆರ್ ಚಟುವಟಿಕೆಗಳ ವಿವರ ಬಹಿರಂಗ ಪಡಿಸಬೇಕಿದೆ. ಆಡಳಿಮಂಡಳಿಗಳು ಹಾಗೂ ಸಿಎಸ್‌ಆರ್ ಸಮಿತಿ ಶಿಫಾರಸು ಆಧಾರಿಸಿ ಚಟುವಟಿಕೆ ನಿರ್ಧರಿಸಲು,ಅನುಷ್ಠಾನ ಹಾಗೂ ಮೇಲ್ವಿಚಾರಣೆ ಅಧಿಕಾರ ಕಂಪನಿಗಳಿಗಿದೆ. ನಿರ್ದಿಷ್ಟ ಪ್ರದೇಶ ಅಥವಾ ಚಟುವಟಿಕೆಗೆ ಖರ್ಚು ಮಾಡುವಂತೆ ಕಂಪನಿಗಳಿಗೆ ಸ ರ್ಕಾರ ಯಾವುದೇ ನಿರ್ದೇ ಶನ ನೀಡುವುದಿಲ್ಲ ಎಂದಿದ್ದಾರೆ.
ಕಾಯ್ದೆ ಅನ್ವಯ ಕಂಪನಿಗಳ ಈ ಅನುದಾನದಡಿ ಕೈಗೊಳ್ಳುವ ಚಟುವಟಿಕೆಗಳು ರಾಷ್ಟ್ರೀಯ ಆದ್ಯತೆಗಳೊಂದಿಗೆ ಸುಸ್ಥಿತರ ಅಭಿವೃದ್ಧಿ ಉತ್ತೇಜಿಸುವಂತಿರುತ್ತದೆ. ಸಾಮಾಜಿಕ,ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ,ಕೊಳಚೆ ಪ್ರದೇಶಗಳ ಅಭಿವೃದ್ಧಿ,ಗ್ರಾಮೀಣಾ ಭಿವೃದ್ಧಿ ಯೋಜನೆಗಳು ಹಾಗೂ ಅಸಮಾನತೆಗಳನ್ನು ಕಡಿಮೆ ಮಾಡುವ ಕ್ರಮಗಳ ಕುರಿತು ಹೆಚ್ಚಿನ ಗಮನ ಹರಿಸುವಂತೆ ಕಂಪನಿಗಳಿಗೆ ತಿಳಿಸಲಾಗವುದು ಎಂದು ಮಲೋತ್ರ ತಿಳಿಸಿದ್ದಾರೆ.