ಮೈಸೂರು: ರಾಜ್ಯ ಸರ್ಕಾರದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ಅರ್ಹ ಗ್ರಾಹಕರ ವಿದ್ಯುತ್ ಪೂರೈಕೆಗೆ 1,995.18 ಕೋಟಿ ರೂ. ಹಾಗೂ ಕೃಷಿ ಪಂಪ್ ಸೆಟ್ ವಿದ್ಯುತ್ ಪೂರೈಕೆಗೆ 6,717.79 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ.
ಸೆಸ್ಕ್ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 2,317,781 ಗ್ರಾಹಕರು ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿದ್ದಾರೆ. ನೋಂದಣಿ ಆಗಿರುವ ಅರ್ಹ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ 2023ರ ಆಗಸ್ಟ್‌ನಿಂದ 2025ರ ಜೂನ್‌ವರೆಗೆ 1,995.18 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ 9,00,148 ಗ್ರಾಹಕರಿಂದ 872.14 ಕೋಟಿ ರೂ., ಚಾಮರಾಜನಗರ ಜಿಲ್ಲೆಯ 2,64,749 ಗ್ರಾಹಕರಿಂದ 186.28 ಕೋಟಿ ರೂ., ಕೊಡಗು ಜಿಲ್ಲೆಯ 1,54,290 ಗ್ರಾಹಕರಿಂದ 149.85 ಕೋಟಿ ರೂ., ಮಂಡ್ಯ ಜಿಲ್ಲೆಯ 4,80,349 ಗ್ರಾಹಕರ 393.69 ಕೋಟಿ ರೂ. ಹಾಗೂ ಹಾಸನ ಜಿಲ್ಲೆಯ 5,18,245 ಗ್ರಾಹಕರ 393.22 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ 6,717.79 ಕೋಟಿ ರೂ. ಸಹಾಯಧನ ನೀಡಲಾಗಿದೆ. ಸೆಸ್ಕ್ ವ್ಯಾಪ್ತಿಯ 10 ಎಚ್.ಪಿ. ಮತ್ತು 10 ಎಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್ ವಿದ್ಯುತ್ ಸ್ಥಾವರಗಳಿಗೆ 2023ರ ಮೇ ತಿಂಗಳಿನಿಂದ 2025ರ ಮೇ ತಿಂಗಳವರೆಗೆ ಮೈಸೂರು ಜಿಲ್ಲೆಯ 1,49,472 ಗ್ರಾಹಕರಿಂದ 1528.37 ಕೋಟಿ ರೂ., ಚಾಮರಾಜನಗರ ಜಿಲ್ಲೆಯ 75,815 ಗ್ರಾಹಕರಿಂದ 1042.97 ಕೋಟಿ ರೂ., ಕೊಡಗು ಜಿಲ್ಲೆಯ 9,337 ಗ್ರಾಹಕರಿಂದ 91.75 ಕೋಟಿ ರೂ.,
ಮಂಡ್ಯ ಜಿಲ್ಲೆಯ 1,21,935 ಗ್ರಾಹಕರಿಂದ 2,287.28 ಕೋಟಿ ರೂ. ಹಾಗೂ ಹಾಸನ ಜಿಲ್ಲೆಯ 1,43,685 ಗ್ರಾಹಕರಿಂದ 1,767.42 ಕೋಟಿ ರೂ. ಸೇರಿದಂತೆ ಐದು ಜಿಲ್ಲೆಗಳ 5,00,244 ಗ್ರಾಹಕರ 6,717.79 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.