ಜಿಲ್ಲೆ

ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಪ್ರತಿಭಟನೆ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣ ಖಂಡಿಸಿ, ಜಿಲ್ಲಾ ಬಿಜೆಪಿ ಘಟಕಾದಿಂದ ಇಲ್ಲಿನ ದುರ್ಗಮ್ಮ ದೇವಸ್ಥಾನದಿಂದ ಡಿಸಿ ಕಚೇರಿಯವರೆಗೆ ರ‌್ಯಾಲಿ ನಡೆಸಿ ಡಿಸಿ ಪ್ರಶಾಂತಕುಮಾರ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಪ್ರತಿಭಟನೆ ಡಿಸಿ ಅವರು ಮನವಿ ಪಡೆದರೂ ಪ್ರತಿಭಟನೆಯು ಮುಂದುವರೆಯಿತು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸದ್ದರಿಂದ ಮಾಜಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ದಲಿತರ ಹಾಗೂ ಅಹಿಂದ ಪರ ಎನ್ನುವ ಸಿಎಂ ಸಿದ್ಧರಾಮಯ್ಯ ಪ್ರಕರಣ ಸಿಬಿಐ ಗೆ ವಹಿಸಿದ್ದರೆ, ಅವರು ಮೇಲೆಯು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಅನುಮಾನ ಬರುತ್ತದೆ ಎಂದು ಆರೋಪ ಮಾಡಿದರು. ಕೂಡಲೇ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು. ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಾರೆ. ಈ ವಿಷಯದಲ್ಲಿ ಭ್ರಷ್ಟಾಚಾರ ಅಂದರೆ ಸಣ್ಣಪದ ಅದರ ಬದಲು ಕಳ್ಳತನ ಮಾಡಿದ್ದಾರೆ ಎನ್ನುವದು ಸೂಕ್ತ. ಇದು ಒಬ್ಬರು ಇಬ್ಬರು ಮಾಡಿದ ಕಳ್ಳತನ ಅಲ್ಲ, ಕಳ್ಳರ ಸಂತೆಯೇ ಇಲ್ಲಿ ಸೇರಿಕೊಂಡಿದೆ. ವಾಲ್ಮೀಕಿ ಸಮುದಾಯಕ್ಕೆ ಮೋಸ ಮಾಡಿದವರು ಸುಟ್ಟು ಹೋಗುತ್ತಾರೆ. ಮಾಜಿ ಸಚಿವ ಬಿ. ನಾಗೇಂದ್ರ ಅವರ ಇತಿಹಾಸ ಬಹು ದೊಡ್ಡದಿದೆ. ದೆಹಲಿವರೆಗೂ ಅದು ಗೊತ್ತಿದೆ. ಕರ್ನಾಟಕ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ಅವರ ಮೇಲೆ ಪ್ರಕರಣಗಳಿವೆ. ಇದು ಕೇವಲ ಆರಂಭ ಮಾತ್ರ, ನಿರಂತರವಾಗಿ ನಮ್ಮ ಹೋರಾಟ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.
ನೂರರು ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ರ‌್ಯಾಲಿಯು ರಾಯಲ್ ವೃತ್ತ ಮಾರ್ಗವಾಗಿ ಡಿಸಿ ಕಚೇರಿಗೆ ತಲುಪಿತು. ಪತ್ರಿಟನೆಯಲ್ಲಿ ಪಕ್ಷದ ಮುಖಂಡರು, ಕೈಗೆ ಕಪ್ಪು ಪಟ್ಟಿ ಧರಿಸಿದ್ದರು. ಕೈಯಲ್ಲಿ ಚೊಂಬು ಹಿಡಿದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು.
ಮಾಜಿ ಸಚಿವ ಶ್ರೀರಾಮುಲು, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ ಮೋಕಾ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಮುಖಂಡರಾದ ಮಲ್ಲೇಶ್, ಶ್ರೀನಿವಾಸ ಮೋತ್ಕರ್, ಉಜ್ವಲ್ ಶ್ರೀಧರ, ಸುಗುಣಾ, ಪುಷ್ಪಲತಾ ಹಾಗೂ ಇತರರಿದ್ದರು.