ಜಿಲ್ಲೆ

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಆರ್.ಕೃಷ್ಣ ನೇಮಕ ಅಗ್ರಹ

ಹಾಸನ: ಪೌರಕಾರ್ಮಿಕ ಸಫಾಯಿ ಕರ್ಮಚಾರಿಗಳ ಮೀಸಲಾತಿಗಾಗಿ ಹೋರಾಟ ನಡೆಸಿದ ಆರ್.ಕೃಷ್ಣ ಅವರನ್ನು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಥವಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಅಖಿಲ ಕರ್ನಾಟಕ ಅರುಂಧತಿಯಾರ್ ಆದಿ ದ್ರಾವಿಡ ಪೌರ ಕಾರ್ಮಿಕ ಮಹಾ ಸಭಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಒತ್ತಾಯಿಸಿದರು.

ಆರ್.ಕೃಷ್ಣ ಪೌರಕಾರ್ಮಿಕರು ಸೇವಾ ಭದ್ರತೆ ಇಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರ ಪರವಾಗಿ ಹೋರಾಟ ನಡೆಸಿ, ಖಾಯಂ ನೌಕರರನ್ನಾಗಿ ಮಾಡಿದರು. ಇದರ ಜೊತೆಗೆ ಪೌರಕಾರ್ಮಿಕರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಹೊಂದಲು ಪ್ರತ್ಯೇಕ ಒಳಮಿಸಲಾಗಾಗಿ ಹೋರಾಟ ಮಾಡುವ ಮೂಲಕ ಪೌರಕಾರ್ಮಿಕರ ಅಭಿವೃದ್ಧಿಗೆ ದುಡಿಯುತ್ತಿರುವವರನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ರಾಮನಗರ ಸೇರಿದಂತೆ ಇತರ ಜಿಲ್ಲೆಯಲ್ಲಿ ಕೂಡ ಪೌರಕಾರ್ಮಿಕರ ಕಾರ್ಮಿಕರ ಸಮುದಾಯದ ಅಭಿವೃದ್ಧಿ ಪರವಾಗಿ ಹೋರಾಟ ಮಾಡುತ್ತಾ ಗುರುತಿಸಿಕೊಂಡಿರುವ ಇವರು, 1996ರಲ್ಲಿ ರಾಜಕೀಯ ಪ್ರವೇಶ ಮಾಡಿ, ಶ್ರೀರಂಗಪಟ್ಟಣ ಪುರಸಭೆಯ ಸದಸ್ಯರಾಗಿ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಉತ್ತಮ ಸೇವೆ ಮಾಡಿರುವ ಅನುಭವ ಇರುವ ಇವರನ್ನ ಸಫಾಯಿಗಳ ಕರ್ಮಚಾರಿ ಆಯೋಗ ಮತ್ತು ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು

ರಾಜಕೀಯ ಅನುಭವ ಹಾಗೂ ಪೌರಕಾರ್ಮಿಕ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಹಲವಾರು ಜನಪರ ಕಾರ್ಯಕ್ರಮಗಳ ಬಗ್ಗೆ ಹೋರಾಟ ಮಾಡಿರುವ ಕೃಷ್ಣ ಅವರನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪರಿಗಣಿಸಿ ನೇಮಕ ಮಾಡಬೇಕು ಎಂದು ಅಖಿಲ ಕರ್ನಾಟಕ ಅರುಂದತಿಯಾರ್ ಮಹಾಸಭಾ ಸಂಘಟನೆ ಒತ್ತಾಯ ಮಾಡುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ವೆಂಕಟೇಶ್, ಗಂಗರಾಜು, ಚಾಮುಂಡಿ, ಮಂಜುನಾಥ್, ಬಾಬು ಸೇರಿದಂತೆ ಇತರರು ಇದ್ದರು.