ಜಿಲ್ಲೆ

ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಬಾಲಮುರಳಿಕೃಷ್ಣ

ನಾಪೋಕ್ಲು: ಮಡಿಕೇರಿಯಲ್ಲಿ ರೆಡ್ ರಿಬ್ಬನ್, ಹೆಲ್ತ್ ಡಿಪಾಟ್ಮೆರ್ಂಟ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಓಟದ ಸ್ಪರ್ಧೆ(5 ಕಿ.ಮೀ. ಓಟ )ಯಲ್ಲಿ ಭಾಗವಹಿಸಿ, ನಾಪೋಕ್ಲು ಸರ್ಕಾರಿ ಪದವಿ ಕಾಲೇಜು ಪ್ರತಿನಿಧಿಯಾಗಿ ಎಸ್.ಗೌತಮ್ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.

ಈ ಸಾಧನೆಯ ಮೂಲಕ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ಇವರಿಗೆ 5000 ರೂ. ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಪದಕ ಲಭಿಸಿದೆ. ಇವರಿಗೆ ತರಬೇತಿದಾರರಾಗಿ ವಿಕಾಸ್ ಶ್ರೀನಿವಾಸ್ ಕಾರ್ಯನಿರ್ವಹಿಸಿದ್ದು ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಗೌತಮ್ ಎಸ್. ವಿರಾಜಪೇಟೆ ನಿವಾಸಿ ಕೆ.ಶೇಖರ್ ಮತ್ತು ಎಸ್.ಶೋಭಾ ದಂಪತಿ ಪುತ್ರರಾಗಿದ್ದಾರೆ.