ಜಿಲ್ಲೆ

ರಾಜ್ಯ ಮಟ್ಟಕ್ಕೆ ಚಂದ್ರಕಾಂತ ಪಾಟೀಲ್ ಕಾಲೇಜು ವಿದ್ಯಾರ್ಥಿಗಳು

ಕಲಬುರಗಿ: ನಗರದ ಚಂದ್ರಕಾಂತ ಪಾಟೀಲ್ ವಿಜ್ಞಾನ ಮತ್ತು ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಸರಾ ಸಿಎಂ ಕಪ್ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಅದಿತಿ ಮೆಹತಾ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ, ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಸತೀಶ ಹಾಗೂ ಪವನ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧೆನೆಗೆ ಸಂಸ್ಥೆ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್, ಪ್ರಾಚಾರ್ಯ ಪಂಚನಾಥ ಪಾಟೀಲ್, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.