ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುತ್ತಿರುವ ಬಿಜೆಪಿ, ಜೆಡಿಎಸ್ ಕುತಂತ್ರ ಖಂಡಿಸಿ, ಸಿಎಂ ಸಿದ್ದರಾಮಯ್ಯರ ತೇಜೋವಧೆ ವಿರೋಧಿಸಿ ಆ.೨೭ರಂದು ರಾಜಭವನ ಚಲೋ ಬೃಹತ್ ಪ್ರತಿಭಟನಾ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಅನಂತ ನಾಯಕ ಹೇಳಿದರು.
ಸಿಎಂ ವಿರುದ್ಧ ದೂರು ಸ್ವೀಕರಿಸಿದ ಕೆಲ ಗಂಟೆಯಲ್ಲೇ ನೋಟೀಸ್ ನೀಡಿದ್ದು, ದೋಷಪೂರಿತ ಎಂದು ಸಚಿವ ಸಂಪುಟ ಸಭೆ ಚರ್ಚಿಸಿ, ನೋಟೀಸ್ ಹಿಂಪಡೆಯುವAತೆ ನಿರ್ಣಯಿಸಿತ್ತು. ಆದರೆ ರಾಜ್ಯಪಾಲರು ದುರುz್ದೆÃಶದಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಜೆಡಿಎಸ್, ಬಿಜೆಪಿಗರು ದುರುz್ದÉÃಶದಿಂದ ಸಿದ್ದರಾಮಯ್ಯರ ತೇಜೋವಧೆ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರ ಸರ್ಕಾರ ರಾಜಭವನ್ನು ದುರ್ಬಳಕೆ ಮಾಡಿ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿಲ್ಲಿಸಬೇಕು. ಸಂವಿಧಾನ ವಿರೋಧಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು, ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು, ರಾಜ್ಯ ಸರ್ಕಾರದ ಸೌರ್ವಭೌಮತೆ ಸಂರಕ್ಷಿಸಬೇಕು ಎಂದು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಾಡಿನ ಪ್ರe್ಞÁವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಬಂಧುಗಳು, ಲP್ಷÀ ಲP್ಷÀ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಹಾಂತೇಶ ಕೌಲಗಿ, ಸುನೀಲ ಮಾರುತಿ ಮಾನಪಡೆ, ಆದರ್ಶ ಯಲ್ಲಪ್ಪ, ನಾಗೇಂದ್ರ ಜವಳಿ, ಅರ್ಜುನ ಗೊಬ್ಬುರ, ಬಿ.ಎಚ್ ಮಂಜುನಾಥ್, ದಿನೇಶ ದೊಡ್ಡಮನಿ, ಶಿವರಾಜ ಸುಬೇದಾರ, ಮಹಿಬೂಬ್ ಶಾ ದರವೇಶಿ ಇತರರಿದ್ದರು.