ಜಿಲ್ಲೆ

ರಾಜ್ಯ ಕಾಂಗ್ರೆಸ್​ ಸೋನಿಯಾ ಗಾಂಧಿಯ ಎಟಿಎಂ

ಮಾಲೂರು ಪಟ್ಟಣದ ಬಾಲಾಜಿ ಚಿತ್ರಮಂದಿರ ವೃತ್ತಕ್ಕೆ ಭಾನುವಾರ ಆಗಮಿಸಿದ ಬಿಜೆಪಿ ಸಂಕಲ್ಪ ರಥಯಾತ್ರೆಯಲ್ಲಿ ಸಚಿವ ಕೆ.ಸುಧಾಕರ್​ ಮಾತನಾಡಿದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​, ಕಂದಾಯ ಸಚಿವ ಆರ್​. ಅಶೋಕ್​, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನಂ, ಸಂಸದ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್​ ಇದ್ದರು.

ಮಾಲೂರು
ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಕೇಂದ್ರದಿಂದಲೂ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನೀಡಿದ್ದಾರೆ. ಆದಾಯದಲ್ಲಿ ಕೇಂದ್ರ ಸರ್ಕಾರ ನಂಬರ್​ 1 ಸ್ಥಾನದಲ್ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಹೇಳಿದರು.
ಹೊಸಕೋಟೆ ಮೂಲಕ ಮಾಲೂರಿಗೆ ಆಗಮಿಸಿದ ಬಿಜೆಪಿ ಸಂಕಲ್ಪ ರಥಯಾತ್ರೆಯನ್ನು ಇರಬನಹಳ್ಳಿ ಗೇಟ್​
ಬಳಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದ ಬಳಿಕ ಪಟ್ಟಣದ ಬಾಲಾಜಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್​ ಸೋನಿಯಾ ಗಾಂಧಿಯ ಎಟಿಎಂ ಆಗಿದೆ. ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ.
ಜೆಡಿಎಸ್​ ಮತ್ತು ಕಾಂಗ್ರೆಸ್​ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್​, ಜೆಡಿಎಸ್​ ಒಳ ಒಪ್ಪಂದ: ಕಂದಾಯ ಸಚಿವ ಆರ್​.ಅಶೋಕ್​ ಮಾತನಾಡಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಒಳ ಒಪ್ಪಂದ ಆಗಿದ್ದು, ಈ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬಂದರೂ ಮೂರು ತಿಂಗಳು ಉಳಿಯುವುದಿಲ್ಲ. ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಜನರು ಮತ ಹಾಕಬೇಡಿ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಈಗಾಗಲೇ ರಾಜ್ಯಕ್ಕೆ ಹೆಚ್ಚು ಅನುದಾನಗಳು ಬಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಕೇಂದ್ರದಿಂದ ಅಭಿವೃದ್ಧಿ: ಬೆಂಗಳೂರು&ಮೈಸೂರು ರೈಲ್ವೆ ಇಲಾಖೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ 7,000 ಕೋಟಿ ರೂಪಾಯಿ ನೀಡಿದೆ. ರಾಜ್ಯದಲ್ಲಿ ಪ್ರತಿ ಹಳ್ಳಿಗೆ ನಳ್ಳಿ ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. 2024 ಒಳಗಡೆ ರಾಜ್ಯದ ಎಲ್ಲ ಹಳ್ಳಿಗಳಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದರು.

ಮಾಲೂರಿನಲ್ಲಿ ಗೆಲುವು ಖಚಿತ: ಆರೋಗ್ಯ ಸಚಿವ ಡಾ.ಸುಧಾಕರ್​ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಇಲ್ಲಿನ ಜನ ಹೆಚ್ಚು ಉತ್ಸಾಹದಿಂದ ಕೂಡಿರುವುದರಿಂದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರಿನಿಂದ ಬಿಜೆಪಿ ಅಭ್ಯರ್ಥಿ ಗೆದ್ದು ಶಾಸಕನಾಗುವುದು ಖಚಿತ ಎಂದು ಹೇಳಿದರು.

ಗೆಲ್ಲುವ ಅಭ್ಯರ್ಥಿಗೆ ಟಿಕೆಟ್​: ಇಲ್ಲಿಯವರೆಗೂ ವಿಧಾನಸಭೆ ಚುನಾವಣೆ ಬಗ್ಗೆ ಮಾಡಿರುವ ಸಮೀೆಗಳಲ್ಲಿ ಮಾಲೂರು ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸುತ್ತಾರೆ ಎಂಬ ಸಮೀೆ ವರದಿ ಬಂದಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್​ ನೀಡಲಾಗುತ್ತದೆ. ಟಿಕೆಟ್​ ಸಿಗದವರಿಗೆ ಸರ್ಕಾರದಲ್ಲಿ ಒಳ್ಳೆಯ ಸ್ಥಾನಮಾನ ನೀಡಲಾಗುವುದು. ಆದ್ದರಿಂದ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್​ ಹೇಳಿದರು.

ಟಿಕೆಟ್​ ಘೋಷಿಸುವಂತೆ ಆಗ್ರಹ : ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೂಡಿ ವಿಜಯಕುಮಾರ್​ ಹಾಗೂ ಮಂಜುನಾಥಗೌಡ, ಪುರ ನಾರಾಯಣಸ್ವಾಮಿ ಬೆಂಬಲಿಗರು ಥಿಯೇಟರ್​ ವೃತ್ತದಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕೇಂದ್ರ ಸಚಿವ ಅನುರಾಗ್​ ಸಿಂಗ್​ ಠಾಕೂರ್​ ಹಾಗೂ ಕಂದಾಯ ಸಚಿವ ಅಶೋಕ್​ ಭಾಷಣ ಮಾಡುವ ಸಮಯದಲ್ಲಿ ಕಾರ್ಯಕರ್ತರು ಕೂಗಾಡಿ ಟಿಕೆಟ್​ ಗೊಂದಲ ಇತ್ಯರ್ಥ ಪಡಿಸಿ ಟಿಕೆಟ್​ ಕ್ಷೇತ್ರಕ್ಕೆ ಅಭ್ಯರ್ಥಿ ೂಷಿಸುವಂತೆ ಒತ್ತಾಯಿ ಸಿದರು. ಆರೋಗ್ಯ ಸಚಿವ ಕೆ.ಸುಧಾಕರ್​ ಮಾಲೂರಿನಲ್ಲಿ ಬಿಜೆಪಿ ಬಲಿಷ್ಠವಾಗಿದೆ. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ, ಹೈಕಮಾಂಡ್​ ಟಿಕೆಟ್​ ೂಷಣೆ ಮಾಡಲಿದೆ. ಯಾರಿಗೂ ಅನ್ಯಾಯವಾಗುವುದಿಲ್ಲ ಎಂದರು.

ಬಿರಿಯಾನಿಗೆ ನೂಕು ನುಗ್ಗಲು: ಮಾಜಿ ಶಾಸಕ ಮಂಜುನಾಥ್​ ಗೌಡ ವಿಜಯಯಾತ್ರೆಗೆ ಆಗಮಿಸಿದ್ದ ಕಾರ್ಯಕರ್ತರಿಗೆ ಬಾಡೂಟ ವ್ಯವಸ್ಥೆ ಮಾಡಿದ್ದರು. ಕಾರ್ಯಕರ್ತರಿಂದ ನೂಕುನುಗ್ಗುಲು ಏರ್ಪಟಿತ್ತು. ಮಾಜಿ ಶಾಸಕ ಮಂಜುನಾಥ್​ಗೌಡ ಹಾಗೂ ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯಕುಮಾರ್​ ಭಾವಚಿತ್ರಗಳಿರುವ ಬ್ಯಾನರ್​ಗಳು ರಾರಾಜಿಸಿದವು. ಬೆಂಬಲಿಗರು ಸಹ ಪ್ರತ್ಯೇಕವಾಗಿ ಟಿಕೆಟ್​ ನಮಗೆ&ಟಿಕೆಟ್​ ನಮಗೆ ಎಂದು ೂಷಣೆಗಳು ಕೂಗುತ್ತಿದ್ದದ್ದು ಕೇಳಿ ಬಂತು.

ಪೂರ್ಣಕುಂಭದೊಂದಿಗೆ ಸ್ವಾಗತ: ಪಟ್ಟಣದ ಬಾಲಾಜಿ ಚಿತ್ರಮಂದಿರ ವೃತ್ತದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ರಥವನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.


ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನಂ, ಸಂಸದ ಎಸ್​.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್​, ಜಿಲ್ಲಾ ಸಂಕಲ್ಪ ಯಾತ್ರೆ ಜಿಲ್ಲಾ ಸಂಚಾಲಕ ಕೆ.ಚಂದ್ರಾರೆಡ್ಡಿ, ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ, ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯ್​ಕುಮಾರ್​, ಮುಖಂಡ ಭೂತಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಪುರ ನಾರಾಯಣ ಸ್ವಾಮಿ ಮತ್ತಿತರರು ಇದ್ದರು.