ಜಿಲ್ಲೆ

ರಾಜೀವ್ ಗಾಂಧಿ ಜ್ಯೋತಿಯಾತ್ರೆಗೆ ಸ್ವಾಗತ

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಆಗಮಿಸಿದ ರಾಜೀವ್ ಗಾಂಧಿ ಜ್ಯೋತಿಯಾತ್ರೆಗೆ ಜಿಲ್ಲಾಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ರಾಜೀವ್ ಗಾಂಧಿ ಜ್ಯೋತಿಯಾತ್ರೆಗೆ ಸ್ವಾಗತಕೋರಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕಳೆದ 34 ವರ್ಷದಿಂದ ರಾಜೀವ್ ಗಾಂಧಿ ಜ್ಯೋತಿಯಾತ್ರೆ ಆಂಭಿಸಲಾಗಿದೆ. ಮೇ.15ರಿಂದ ಬೆಂಗಳೂರಿನಿಂದ ರಾಜೀವ್ ಗಾಂಧಿ ಜ್ಯೋತಿಯಾತ್ರೆ ಚಾಮರಾಜನಗರಕ್ಕೆ ಬಂದಿದೆ. ಸತ್ಯಮಂಗಲ, ಕೊಯಮತ್ತೂರು. ಪಾಲಕ್ಕಾಡು, ಕೊಚ್ಚಿನ್, ಕೋಲಂ, ತ್ರಿವೆಂಡ್ರಂ,ಕನ್ಯಾಕುಮಾರಿ, ತಿರುನಲ್ವೇಲಿ ಮೂಲಕ ಮೇ. 21ರಂದು ಪೆರಂಬದೂರಿಗೆ ತಲುಪಲಿದೆ. ದೇಶದ ಏಕೀಕರಣ, ರಾಷ್ಟ್ರನಿರ್ಮಾಣ ಹಾಗೂ ದೇಶದ ಏಕತೆಯನ್ನು ಬಲಪಡಿಸುವ ಸಂದೇಶ. ರಾಜೀವ್ ಗಾಂಧಿಯವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ರಾಜೀವ್ ಗಾಂಧಿ ಜ್ಯೋತಿಯಾತ್ರೆಯಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಸದಸ್ಯರಾದ ರಾಜು, ಪುಟ್ಟಸ್ವಾಮಿ, ನಗರಸಭೆ ನಾಮನಿರ್ದೇಶನ ಸದಸ್ಯ ಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಕುಮಾರ್, ಮರಿಯಾಲದಹುಂಡಿ, ಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪದ್ಮಪುರುಷೋತ್ತಮ್, ಕಾವೇರಿಶಿವಕುಮಾರ್, ನಗರಸಭೆ ಮಾಜಿ ಸದಸ್ಯ ಮಹದೇವು, ರವಿಗೌಡ, ಆಶೋಕ್ ಹಾಗೂ ಇತರರು ಹಾಜರಿದ್ದರು.