ಜಿಲ್ಲೆ

ರಾಜಸ್ಥಾನ ಸಂಘದಿಂದ ರಾಮೋತ್ಸವ

ಚಿತ್ರದುರ್ಗ: ಅಯೊಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆಯ ಕ್ಷಣ ಕಣ್ತುಂಬಿಕೊಳ್ಳಲು ನಗರದ ಆನೆಬಾಗಿಲು ಕೆಳಗಡೆ ಸೇರಿ ಕೆಲವೆಡೆ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಧ್ವಜ, ಗೋ ಪೂಜೆ, ನಂತರ ಪ್ರಸಾದ ವಿತರಣೆಯಾಗಲಿದೆ.

ಆನೆಬಾಗಿಲು ಸಮೀಪದ ಆಂಜನೇಯ ಸ್ವಾಮಿ ಸನ್ನಿಧಿ ಮುಂಭಾಗ ರಾಜಸ್ಥಾನ ಸಂಘದಿಂದ ಬೆಳಗ್ಗೆಯಿಂದ ಸಂಜೆವರೆಗೂ ವಿವಿಧ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 3 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಾಡು ಪ್ರಸಾದ ವಿತರಿಸಲು ಸಂಘ ಸಿದ್ಧತೆ ಮಾಡಿಕೊಂಡಿದೆ.