ಜಿಲ್ಲೆ

ರಾಜಸ್ಥಾನ ಪ್ರಿಮೀಯರ್ ಲೀಗ್ 15ರಿಂದ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬ್ಲೂಮರ್ಸ್ ಗ್ರುಪ್ ಕಳೆದ 13 ವರ್ಷಗಳಿಂದ ಆಯೋಜಿಸಿಕೊಂಡು ಬಂದಿರುವ ರಾಜಸ್ಥಾನ ಪ್ರೀಮಿಯರ್ ಲೀಗ್ (ಆರ್​ಪಿಎಲ್) ಕ್ರಿಕೆಟ್ ಟೂರ್ನಾಮೆಂಟ್ ಈ ಬಾರಿ ಡಿ. 15ರಿಂದ 17ರವರೆಗೆ ನಗರದ ನೆಹರು ಮೈದಾನದಲ್ಲಿ ನಡೆಯಲಿದೆ.

ಬುಧವಾರ ಸಂಜೆ ಆರ್​ಪಿಎಲ್ ತಂಡಗಳ ಆಟಗಾರರ ಟೀ-ಶರ್ಟ್ ಹಾಗೂ ಟ್ರೋಫಿ ಅನಾವರಣವನ್ನು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ನೆರವೇರಿಸಿದರು.

ಈ ಟೂರ್ನಾಮೆಂಟ್​ನಲ್ಲಿ 12 ತಂಡಗಳು ಹಾಗೂ 156 ಆಟಗಾರರು ಆಡಲಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ರಾಜಸ್ಥಾನ ಸಮುದಾಯದವರಿಂದ ಕ್ರೀಡಾ ಚಟುವಟಿಕೆಗಳು ಇನ್ನು ಹೆಚ್ಚೆಚ್ಚು ನಡೆಯಲಿದೆ ಎಂದು ಎನ್. ಶಶಿಕುಮಾರ ಹಾರೈಸಿದರು.

ಸುರೇಶ ಜೈನ (ಲಕ್ಕಿ), ಪ್ರಕಾಶ ಕಟಾರಿಯಾ, ವಿಕ್ರಮ್ ಪೂಮಾನಿ, ಮೊನೆಕ್ಸಾ ರಾಜಪುರೋಹಿತ, ಮನೀಷ್ ಕೋಠಾರಿ, ಹರೀಶ ರಾಜಪುರೋಹಿತ, ದಿನೇಶ ರಾಠೋಡ, ಇತರರು ಇದ್ದರು.