ಹೊಳೆನರಸೀಪುರ: ರಾಜಕೀಯವಾಗಿ ಮನಸ್ಥಾಪವಿದ್ದರೆ ಬೇಸರಮಾಡಿಕೊಳ್ಳದೆ ಕ್ಷಮಿಸಿಬಿಡಿ ಮುಂದೆ ಸರಿದೂಗಿಸಿಕೊಂಡು ಹೋಗುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಹಾಸನ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದೊಡ್ಡಹಳ್ಳಿ ಸಂತೆ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಆನೆ ಕನ್ನಂಬಾಡಿ ಹಾಗೂ ಇತರೆ 55 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ನಮ್ಮ ಶಾಸಕರಾದ ಎ ಟಿ ರಾಮಸ್ವಾಮಿ ರವರು ಸರಳ ಸಜ್ಜನಿಕೆ ವ್ಯಕ್ತಿತ್ವ ಉಳ್ಳವರು. ಅವರನ್ನು ಹೋಗಳುವಸ್ತು ನಾನು ದಿದ್ದವನಲ್ಲ ಆದರೂ ನಮ್ಮ ಬಗ್ಗೆ ಮನಸ್ತಾಪ ಮಾಡಿಕೊಂಡಿದ್ದರೆ ಬೇಸರ ಮಾಡಿಕೊಳ್ಳದೆ ಕ್ಷಮಿಸಬೇಕು ಎಂದು ಕ್ಷಮೆ ಯಾಚಿಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸೇರಿ ಕೆಲಸ ಮಾಡಿಕೊಂಡು ಹೋಗುತ್ತೇವೆ.ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದರು.
ಎಚ್ ಡಿ ದೇವೇಗೌಡರಂತೆ ಎ ಟಿ ರಾಮಸ್ವಾಮಿ ಅವರು ಸಹ ರೈತರ ಪರ ಹೆಚ್ಚು ಕಾಳಜಿ ಇಟ್ಟುಕೊಂಡವರು. ನಾವೆಲ್ಲಾ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅರಕಲಗೂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗುತ್ತೇವೆ ಎಂದು ಹೇಳಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎಟಿ ರಾಮಸ್ವಾಮಿ ಅವರು ಮಾತನಾಡಿ ಪ್ರಜ್ವಲ್ ರೇವಣ್ಣನವರು ತನ್ನನ್ನು ಮುನಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ ಆದರೆ ತಾನು ನ್ಯಾಯಸಮತವಾಗಿ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ ಜನರ ಕಷ್ಟ ಸುಖಗಳಿಗೆ ಭಾಗಿಯಾಗುತ್ತಿದ್ದೇನೆ ನ್ಯಾಯಪರ ನಿರ್ಭಯವಾಗಿ ಧ್ವನಿ ಎತ್ತುತ್ತಿದ್ದೇನೆ ಯಾರಲ್ಲೂ ಮುನಿಸಿಕೊಂಡು ಬಂದವನಲ್ಲ. ಯಾವ ಅಧಿಕಾರಿಗಳಿಗೂ ಸಾರ್ವಜನಿಕರಿಗೂ ಹಸ್ತಕ್ಷೇಪ ಮಾಡಿದವನಲ್ಲ ಎಂಎಲ್ಎ ಆದವರು ಎಸ್ಕಾರ್ಟ್ ತೆಗೆದುಕೊಳ್ಳುತ್ತಾರೆ ನಾನು ನಾಲ್ಕು ಬಾರಿ ಶಾಸಕನಾಗಿದ್ದರೂ ಸಹ ಎಸ್ಕಾರ್ಟ್ ತೆಗೆದುಕೊಂಡಿಲ್ಲ ಅದು ನನಗೆ ಅವಶ್ಯಕತೆ ಇಲ್ಲ ನನ್ನ ರಕ್ಷಣೆಗೆ ಜನರೇ ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಯಾವುದೇ ಜಾತಿ ಮತ ಧರ್ಮ ಬೇಧ ಭಾವಗಳಿಲ್ಲದೆ ಎಲ್ಲರನ್ನೂ ಸಮಾನವಾಗಿ ನ್ಯಾಯಯುತವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಾನೇನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಕ್ಷಮೆ ಕೇಳಲು ಸಿದ್ಧನಿದ್ದೇನೆ ಅಧಿಕಾರಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ನಾನು ಒಂದು ಬದ್ಧತೆ ಇಟ್ಟುಕೊಂಡು ಹಲವು ದಶಕಗಳಿಂದ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ ಭ್ರಷ್ಟ ರಾಜಕಾರಣ ಮಾಡಿಕೊಂಡು ಬಂದವನಲ್ಲ. ಲೂಟಿಕೋರರಿಗೆ ಕೊಲೆಗಡುಕರಿಗೆ ಕಳ್ಳರಿಗೆ ಸಹಕಾರ ನೀಡಿಲ್ಲ ಊರಿಗೆ ಹೇಳಿದ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜ್, ಜಯಕುಮಾರ್ ಸೂರಜಿಗೆ ಮುಖ್ಯ ಇಂಜಿನಿಯರ್ ಪ್ರಶಾಂತ್ ಮಲ್ಲಿಕಾರ್ಜುನ ಇ ಓ ಪಿ ಆರ್ ಗೋಪಾಲ್ ಜಿಲ್ಲಾ ಕ್ರೀಡಾ ಯೋಜನಾಧಿಕಾರಿ ಸಿ ಕೆ ಹರೀಶ್ ಮತ್ತಿತರರಿದ್ದರು