filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ರಾಜಕೀಯ ಪ್ರೇರಿತ ದಾಳಿ ಸಹಿಸಲಾಗದು

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಾನು ಸಿಎಂ ಸಿದ್ದರಾಮಯ್ಯ ಪರ ಸಾಫ್ಟ್ ಆಗಿಲ್ಲ, ಹಾರ್ಡ್ ಆಗಿಯೂ ಇಲ್ಲ. ಅವರು ಕಾಂಗ್ರೆಸ್‌ನವರು. ಬಿಜೆಪಿ ಇಡಿ, ಸಿಬಿಐ, ಐಟಿ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದರೆ ಅದನ್ನು ನೋಡಿ ಸುಮ್ಮನಿರಲಾಗದೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಧೋರಣೆ ಮತೀಯ ಶಕ್ತಿಗಳ ವಿರುದ್ಧ ಹಾರ್ಡ್ ಆಗಿರುತ್ತದೆ ಎಂದು ಪ್ರತಿಕ್ರಿಯಿಸಿದರು.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆೆ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ಉಸ್ತುವಾರಿಗಳು ನಿರ್ಧರಿಸುತ್ತಾರೆ. ಅವರ ನಿರ್ಧಾರಕ್ಕೆ ಹೈಕಮಾಂಡ್ ಅಂತಿಮ ಒಪ್ಪಿಗೆ ಸೂಚಿಸಲಿದೆ ಎಂದರು.
ಮುಡಾದಿಂದ ಇಡಿ ಅಧಿಕಾರಿಗಳು ದಿನಪತ್ರಿಕೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಿವೇಶನಗಳ ದಾಖಲೆ ಎಷ್ಟಿರುತ್ತವೆ? ಚುನಾವಣೆ ಬಾಂಡ್, ಪಿಎಂ ಕೇರ್ ಹಾಗೂ ನೋಟು ಅಮಾನ್ಯೀಕರಣದ ಭ್ರಷ್ಟಾಚಾರಗಳ ಬಗ್ಗೆ ಬಿಜೆಪಿ ಮೊದಲು ಮಾತನಾಡಲಿ ಎಂದು ಹೇಳಿದರು.
ಸಿಬಿಐ, ಇಡಿ, ಐಟಿ ಬಿಜೆಪಿಯ ಅಂಗ ಸಂಸ್ಥೆಗಳಾಗಿವೆ. ಮುಂದಿನ ಚುನಾವಣೆಗೆ ಪಕ್ಷದ ಹೆಸರನ್ನು ಭ್ರಷ್ಟಾಚಾರ ಜನತಾ ಪಾರ್ಟಿ ಎಂದು ಹೆಸರು ಬದಲಾಯಿಸಿಕೊಳ್ಳಲಿ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಕಾಲದ ಶೇ.40ರ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದಾಗಿ ಕಾಂಗ್ರೆಸ್ ಹೇಳಿತ್ತು. ಅದರಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ.
ಸಿಎಂ ರಾಜೀನಾಮೆ ಕೊಡಬೇಕೆಂಬ ಪ್ರತಿಪಕ್ಷಗಳ ಹೇಳಿಕೆಗಳನ್ನು ತಳ್ಳಿ ಹಾಕಿದ ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ರಂಗ-ಬಿರ್ಲಾ ಎಂದು ಕರೆದರು. ಇವರ ಜತೆ ಸೇರಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರ ಬೀಳಲಿದೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದರು.
ವಂಶಪಾರಂಪರ್ಯ ರಾಜಕಾರಣ ಟೀಕಿಸುವ ಬಿಜೆಪಿ, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿದೆ. ಸಾಮಾನ್ಯ ಕಾರ‌್ಯಕರ್ತರು ರಸ್ತೆ ಅಥವಾ ಜೈಲಲ್ಲಿ ಇರಬೇಕೆಂದು ಬಿಜೆಪಿ, ಆರ್‌ಎಸ್‌ಎಸ್ ಭಾವಿಸಿವೆ. ಗೌರಿ ಲಂಕೇಶ್‌ಹತ್ಯೆ ಆರೋಪಿಗಳನ್ನು ಸನ್ಮಾನಿಸಿದ್ದನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ಇವರ ದ್ವೇಷಾಸೂಯೆಗಳಿಗೆ ಜನರು ಬೇಸತ್ತಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡುತ್ತಿವೆ. ದೇಶದಲ್ಲಿ 24 ಕೋಟಿ ಜನರು ಬಡತ ನ ರೇಖೆಗಿಂತ ಕೆಳಗೆ ಇದ್ದಾರೆ. ಎರಡು ಖಾಸಗಿ ಕಂಪನಿಗಳು ದೇಶದ ಸಂಪತ್ತನ್ನು ತಿಂದು ತೇಗುತ್ತಿವೆ. ಕೇಂದ್ರ ಸಚಿವ ಪ್ರಲ್ಹ್ಲಾದ್ ಜೋಶಿ, ತ ಮ್ಮನಿಗೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ, ಇದು ಬಿಜೆಪಿ ರಾಜಕಾರಣ. ಬೆಳಗಾವಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮವೆಂದರು.