ಜಿಲ್ಲೆ

ರಾಜಕೀಯ ನಾಯಕರಿಗೆ ಪ್ರವೇಶವಿಲ್ಲ ಎಂಬ ಫಲಕ ಹಾಕಿದ ಗ್ರಾಮಸ್ಥರು

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ(ಉತ್ತರ ಕನ್ನಡ)

ತಾಲೂಕಿನ ಕಾನಸೂರು ಕರೆಮನೆ ಸಮೀಪದ ಶ್ರೀನಿವಾಸ ಜಡ್ಡಿ, ಕೆಳಗಿನ ಹೊಸಕೊಪ್ಪ ಗ್ರಾಮಸ್ಥರು ರಾಜಕಾರಣಿಗಳಿಗೆ ಪ್ರವೇಶವಿಲ್ಲ ಎಂದು ಊರ ಬಾಗಿಲಲ್ಲ ಬ್ಯಾನರ್‌ ಹಾಕಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ. ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಸುಮಾರು 40 ಜನಸಂಖ್ಯೆ ಇರುವ ಗ್ರಾಮದಲ್ಲಿ ತೂಗು ಸೇತುವೆ ಮಾಡಿಕೊಡಬೇಕು. ಗ್ರಾಮದ ಎರಡು ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ವಿಷಯ ತಿಳಿದ ಸಿದ್ದಾಪುರದ ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ, ತಾ.ಪಂ. ಇಒ ಪ್ರಶಾಂತ ರಾವ್, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ದಿ‌ ದಿಲೀಪ ಇನ್ನಿತರರು ಆಗಮಿಸಿ ಅಹವಾಲು ಆಲಿಸಿದರು.

ಈ ಸಂದರ್ಭದಲ್ಲಿ ಒಂದು ವಾರದಲ್ಲಿ ನಿಮಗೆ ಸಮಸ್ಯೆಯನ್ನು ಬಗೆಹರಿಸಿಕೊಡುವ ತಾತ್ಕಾಲಿಕ ಭರವಸೆಯನ್ನು ನೀಡಿದರೂ ಸಹ ನಾಗರಿಕರು ಅದಕ್ಕೆ ಒಪ್ಪಿಲ್ಲ. ಯಾವುದೇ ಕಾರಣಕ್ಕೂ ನಿಮ್ಮ ಭರವಸೆಯನ್ನು ನಾವು ನಂಬುವುದಿಲ್ಲ. ನೀವು ಕಾಮಗಾರಿಯನ್ನು ಪ್ರಾರಂಭಿಸಿ. ಅಲ್ಲಿಯವರೆಗೆ ನಾವು ಹೋರಾಟವನ್ನು ನಡೆಸುತ್ತೇವೆ. ಯಾವುದೇ ಕಾರಣಕಕ್ಕೂ ನಾಮಫಲಕವನ್ನು ತೆಗೆಯುವುದಿಲ್ಲ ಎಂದು ಪಟ್ಟನ್ನು ಹಿಡಿದಿದ್ದಾರೆ. ತಹಸೀಲ್ದಾರ ಮಂಜುನಾಥ ಈ ಕುರಿತು ನಾವು ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆ  ಮಾಡುತ್ತೇವೆ ಎಂದಿದ್ದಾರೆ.