ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಜಿಲ್ಲೆ

ರಾಜಕೀಯ ಅಪಸವ್ಯದಲ್ಲಿ ವಿನಾಕಾರಣ ಟೀಕೆ

ಬಾಗಲಕೋಟೆ: ಬಿಟಿಡಿಎ, ಸಂಘ ಪರಿವಾರ ವಿಷಯದಲ್ಲಿ ನನ್ನ ಅಪರಾಽ ಸ್ಥಾನದಲ್ಲಿ ನಿಲ್ಲಿಸುವ ವ್ಯರ್ಥ್ಯ ಪ್ರಯತ್ನ ಮಾಡಲಾಗುತ್ತಿದೆ. ಆ-ï ನಾಲೇಜ್ ಮೋರ ಡೆಂಜರ್ ಎನ್ನುವ ಹಾಗೇ ಅಲ್ಪ ಜ್ಞಾನ ಇಟ್ಟುಕೊಂಡು ಆರೋಪ ಮಾಡಿದ್ದಾರೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ರಾಜಕೀಯ ಅಪಸವ್ಯದಲ್ಲಿ ಇದ್ದು, ಈ ರೀತಿ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ವಿಷಯದಲ್ಲಿ ಹೈಕೋರ್ಟ ಆದೇಶ ವಿಷಯದಲ್ಲಿ ಜಾಣ ಕುರುಡುತನ ಪ್ರದರ್ಶಿಸಿ ಹೇಳಿಕೆ ಮಾಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜನರ ಮತದಾನದಿಂದ ಆಯ್ಕೆಯಾದ ಜನಪ್ರತಿನಿಽಯಾಗಿದ್ದೇನೆ. ಹೀಗಾಗಿ ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಸದಸ್ಯ ಸ್ಥಾನವನ್ನು ನೀಡಿ ೨೦೨೪ ಜುಲೈ ೧೬ ಸರ್ಕಾರ ಆದೇಶಿಸಿತ್ತು, ಸೆಪ್ಟಂಬರ್ ೧೦ ರಂದು ನಿಮ್ಮನ್ನು ಬಿಟಿಡಿಎ ಸದಸ್ಯತ್ವ ಸ್ಥಾನದಿಂದ ಮುಕ್ತಗೊಳಿಸುವಂತೆ ತಿಳಿಸಿದರು. ಇದರಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಅವರ ಪಾತ್ರವು ಇತ್ತು. ಹೀಗಾಗಿ ಸದಸ್ಯತ್ವ ಮಾಡುವಾಗ ಇರುವ ನಿಯಮಾವಳಿ ಏನು?, ಕಾನೂನು ಯಾವುದು ? ಈಗ ಏಕೇ ಕೈ ಬಿಡಲಾಗಿದೆ ಅಂತ ಹೈಕೋರ್ಟ ಮೊರೆ ಹೋಗಿದ್ದೇನೆ. ಯಾವುದೇ ಕಾರಣಕ್ಕೂ ಬಿಟಿಡಿಎ ರದ್ದುಗೊಳಿಸಿ ಅಂತ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಕಾನೂನು, ನಿಯಮವಳಿ ಪರಿಶೀಲನೆ ಮಾಡಿತು. ನ್ಯಾಯಾಽÃಶರ ಕೇಳಿದ ಮಾಹಿತಿ ಸರ್ಕಾರದ ಬಳಿ ಉತ್ತರ ಇರಲಿಲ್ಲ. ಬುಡಾ ಇದ್ದಾಗ ಬಿಟಿಡಿಎ ಏಕೆ ಎನ್ನುವುದಕ್ಕೆ ಸ್ಪಷ್ಟವಾದ ನಿಲುವು ವ್ಯಕ್ತಪಡಿಸಲಿಲ್ಲ. ಹೀಗಾಗಿ ಕೋರ್ಟ ರದ್ದುಗೊಳಿಸಿ ಆದೇಶಿಸಿತು. ಈಗ ತಡೆ ಆಜ್ಞೆ ಸಿಕ್ಕಿದೆ. ನಾನು ಬಿಟಿಡಿಎ ಸದಸ್ಯ ಆಗುವದಕ್ಕೆ ನಿಮಗೇಕೆ ಸಿಟ್ಟು, ಕೋಪ ಇದೆ. ಮೂರು ಸಾರಿ ಶಾಸಕರಾಗಿ, ಎರಡುಸಾರಿ ಬಿಟಿಡಿಎ ಅಧ್ಯಕ್ಷರಾಗಿದ್ದಾಗ ಮಾಡಿದ ಭ್ರಷ್ಟಾಚಾರ ಭಯ ನಿಮ್ಮನ್ನು ಕಾಡುತ್ತಿದೀಯಾ? ಪಿ.ಎಚ್.ಪೂಜಾರ ಸದಸ್ಯರಾದರೇ ಅವೆಲ್ಲ ಹೊರಗೆ ಬರುತ್ತಾವ ಅಂತ ಆತಂಕ ಮನೆ ಮಾಡಿದೆ ಅನಿಸುತ್ತೆ. ನಿಜವಾಗಿಯೂ ವಿರೋಧ ಪಕ್ಷ ಕಾಂಗ್ರೆಸ್ ನವರಿಗೆ ಭಯ ಆಗಬೇಕಿತ್ತು, ನಿಮಗೇಕೆ ಇಂತಹ ನೋವು ಅಂತ ಲೇವಡಿ ಮಾಡಿದರು.

ಬಿಟಿಡಿಎ ಕಾ-Àðಸ್ -Àಂಡ್ ೩೫೦ ಕೋಟಿ ರೂ. ಹೋಗಿದ್ದು ನಿಮ್ಮ ತಪ್ಪಿನಿಂದ. ನೀವು ಶಾಸಕರು, ಅಧ್ಯಕ್ಷರಾಗಿದ್ದ ವೇಳೆ ಸರ್ಕಾರದ ಆದೇಶವಾಗಿದೆ. ಅವಾಗ ತಡೆಲಿಲ್ಲ ಏಕೆ? ಬಾಗಲಕೋಟೆ ನಗರ ನಡುಗಡೆ ಸ್ಥಳಾಂತರಕ್ಕೆ ಆಗ್ರಹಿಸಿ ೧೫ ವರ್ಷದಿಂದ ಹೋರಾಟ ನಡೆಯುತ್ತಿದೆ. ಒಂದು ದಿನವು ಆ ಬಗ್ಗೆ ಗಮನ ಹರಿಸಲಿಲ್ಲ. ಈಗ ಏಕೇ ಅಭಿವೃದ್ಧಿಯ ಚಿಂತನೆ ಅಂತ ಪ್ರಶ್ನೆಗಳ ಸುರಿಮಳೆಗೈದರು.

ಉಚ್ಛಾಟಿತರ ಜೊತೆ ಇದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಸಮ್ಮುಖದಲ್ಲಿ ಅವರೆಲ್ಲ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಓಡಾಡಿದ್ದಾರೆ. ಮತ ಹಾಕಿದ್ದಾರೆ. ಸದಸ್ಯತ್ವ ಸ್ಥಾನ ಪಡೆದುಕೊಂಡಿದ್ದಾರೆ. ನಿಮ್ಮ ವೈಯಕ್ತಿಕ ಕಾರಣಕ್ಕೆ ಬೇಕು-ಬೇಡವಾದರೇ, ಪಕ್ಷವು ಅದನ್ನು ಸ್ವೀಕರಿಸಬೇಕಾ? ಇದು ಯಾವ ನೀತಿ? ಎಂದು ಹೇಳಿದರು.

ಸಂಘ ಪರಿವಾರದ ವಿಷಯದಲ್ಲಿ ನಾನು ನೀಡಿದ ದೇಣಿಗೆ ಚಕ್ ಬೌನ್ಸ್ ಆಗಿದೆ. ಐದಾರು ಅಕೌಂಟ್ ಇದೇ, ಚಕ್ ನೀಡಿದ ಅಕೌಂಟನಲ್ಲಿ ಹಣ ಇರಲಿಲ್ಲ. ಜಮೆ ಆಗಲಿಲ್ಲ. ಅದಕ್ಕೆ ಸಂಬ0ಧಪಟ್ಟ ವ್ಯಕ್ತಿಗಳ ಜೊತೆ ಮಾತನಾಡಿದ್ದೇನೆ. ಹಣ ತಲುಪಿಸುವುದಾಗಿ ತಿಳಿಸಿದ್ದೆ. ಅದಕ್ಕೂ ನಿಮಗೂ ಸಂಬAಧವೇನು?, ಅಽಕಾರದಲ್ಲಿ ಇದ್ದಾಗ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದೀರಿ.ನೀವು ಯಾವ ದೊನ್ನೆ ನಾಯಕ ಅಂತ ಮಾಜಿ ಶಾಸಕ ವೀರಣ್ಣ ಚರಂತಿಮಠಗೆ ಖಾರವಾಗಿ ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಅವಮಾನ ಮಾಡಿದ್ದೀರಿ. ಎಬಿಸಿಡಿಎ ಗೊತ್ತಿಲ್ಲ ನಿಮಗೆ. ಪಕ್ಷದಲ್ಲಿ ಬೂತಮಟ್ಟ ಅಧ್ಯಕ್ಷನು ಆಗಿಲ್ಲ ತಾವು, ರಾಜಕೀಯ ಅಪಸವ್ಯದಲ್ಲಿ ಬದುಕುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.