ಬಾಗಲಕೋಟೆ: ನಾನು ಇಲ್ಲಿ ರಾಜಕಾರಣ ಮಾತನಾಡುವುದಿಲ್ಲ. ಇಲ್ಲಿಗೆ ಬಂದವರು ಯಾರು ಏನೇನು ರಾಜಕಾರಣ ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಗೆ. ನಾನು ಈ ವಿಚಾರದಲ್ಲಿ ರಾಜಕಾರಣ ಮಾತನಾಡುವುದಿದ್ದರೆ ಮಾಧ್ಯದವರ ಎದುರು ಹೇಳುತ್ತೇನೆ. ಮುಖ್ಯಮಂತ್ರಿಗಳು ಇದೀಗ ಏನೋ ಒಂದು ಪರಿಹಾರ ದಾರಿ ಕಂಡುಕೊಳ್ಳುತ್ತಾರೆ. ಈ ಬಗ್ಗೆ ಚರ್ಚಿಸಲು ನೀವು ಡಿ.೧೧ ರಂದು ನಡೆಯುವ ಸಭೆಗೆ ಬರುವಂತೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ನಡೆದಿರುವ ಆಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭಾನುವಾರ ಆಗಮಿಸಿ, ಹೋರಾಟಗಾರರ ಅಹವಾಲು ಆಲಿಸಿ ಮಾತನಾಡಿದರು.
ಈ ವೇಳೆ ರೈತ ಮುಖಂಡರೊಬ್ಬರು, ಕಾವೇರಿ ವಿಚಾರದಲ್ಲಿ ಸಂತ್ರಸ್ತರಿಗೆ ಎಲ್ಲರಿಗೂ ಪರಿಹಾರ ಸಿಕ್ಕಿದೆ. ನಮ್ಮ ಕೃಷ್ಣಾ ಸಂತ್ರಸ್ತರಿಗೆ ಯಾಕೆ ಸಿಗುತ್ತಿಲ್ಲ. ಇದಕ್ಕೆ ನಮ್ಮ ಶಾಸಕರು ಅಽವೇಶನದಲ್ಲಿ ಧ್ವನಿ ಎತ್ತಲ್ಲ ಎಂದೋ ಅಥವಾ ಇವರಿಗೆ ಬೆಲೆ ಇಲ್ಲವೋ ಅಂತ. ಆಗಿದ್ದರೆ ಇವರು ಮಂತ್ರಿ ಇದ್ದರೇನು? ಶಾಸಕರಿದ್ದೇನು -Àಲ. ಇವರ ಎದುರು ನಾವು ಒತ್ತಡ ಹಾಕಿದರೆ -Àಲವೇನು ಎಂದು ಪ್ರಶ್ನಿಸಿದ್ದು, ಸಚಿವರನ್ನು ಗರಂ ಆಗುವಂತೆ ಮಾಡಿತು.
ಇಲ್ಲಿ ರಾಜಕಾರಣ ಮಾಡಬೇಕು ಎಂದಾದರೆ, ನೀವು ಯಾರದ್ದೋ ಮಾತು ಕೇಳಿ ಹೇಳಿದರೆ ನಾನು ರಾಜಕಾರಣ ಮಾತನಾಡಲು ರೆಡಿ ಎಂದಿದ್ದು, ಅಲ್ಲಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು. ಬಳಿಕ ಹೋರಾಟದ ಮುಖಂಡರು ಸಮಾಧಾನ ಪಡಿಸಿದರು.
ಇನ್ನು ವಿಜಯಪುರದ ವಕೀಲರೊಬ್ಬರು ಮಾತನಾಡಿ, ಯೋಜನೆ ಬಗ್ಗೆ ಎಲ್ಲ ಸರ್ಕಾರಗಳು ವಿಳಂಭ ನೀತಿ ಅನುಸರಿಸುತ್ತ ಬಂದಿವೆ. ಸಿದ್ದರಾಮಯ್ಯ ಸರ್ಕಾರ ಮೊದಲ ಅವಽಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಅವರೇ ಅಽಕಾರದಲ್ಲಿ ಇದ್ದಾರೆ. ಸದ್ಯ ಇವತ್ತಿನ ಮಾರುಕಟ್ಟೆಯಲ್ಲಿ ಜಮೀನಿನ ಬೆಲೆ ಏನಿದೆ? ಅಽಕಾರಿಗಳು ಅಯೋಗ್ಯರು ಇದ್ದಾರೆ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲ್ಲ. ಇವತ್ತು ಯೋಜನೆ ಕೈಗೆತ್ತಿಕೊಂಡರೆ ೨ ಲಕ್ಷ ಕೋಟಿ ರೂ. ಆಗುತ್ತದೆ. ವಿಳಂಭವಾದರೆ ಮುಂದೆ ರೈತರಿಗೆ ೧೦ ಲಕ್ಷ ಕೋಟಿ ರೂ. ಕೊಡಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ, ಜನರು ಹಣವೂ ಹಾನಿ ಆಗುತ್ತದೆ. ಸಿದ್ದರಾಮಯ್ಯ ಅವರು ಉಳಿದಿರುವ ಅವಽಯಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಸಚಿವ ತಿಮ್ಮಾಪುರ ಮಾತನಾಡಿ, ರಾಜಕಾರಣಿಗಳು ಅಽಕಾರ ಇಲ್ಲದಾದ ಎಕರೆಗೆ ೬೦ ಲಕ್ಷ ಕೊಡಿ, ೮೦ ಲಕ್ಷ ಕೊಡಿ ಎಂದವರು ಇದ್ದೇವೆ. ಅಽಕಾರಕ್ಕೆ ಬಂದಾಗ ಅದನ್ನೆ ತಿರುಚಿ ಮಾತನಾಡಿದವರು ಇದ್ದೇವೆ. ಸದನದಲ್ಲಿ ಯರ‍್ಯಾರು ಎಷ್ಟೆಷ್ಟು ಲಕ್ಷ ಕೊಡಬೇಕು ಎಂದು ಹೇಳಿದ್ದಾರೆಂದು ನಾನು ನೋಡಿದ್ದೇನೆ. ರಾಜಕಾರಣಿಗಳು ವಿಪಕ್ಷ ಇದ್ದಾಗ ಒಂದು, ಅಽಕಾರಕ್ಕೆ ಬಂದಾಗ ಒಂದು ಮಾತು ಇರಬಾರದು. ಇವತ್ತು ಗೈಡ್ ಲೈನ್ಸ್ ಪ್ರಕಾರದರ ಹೆಚ್ಚು ಕಡಿಮೆ ಮಾಡಲು ತೊಂದರೆ ಆಗಿದೆ. ಈ ಎಲ್ಲ ವಿಷಯಗಳನ್ನು ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಚರ್ಚೆ ಮಾಡೋಣ ಎಂದರು.
ಈಗಾಗಲೇ ನಾನು ನಿಮ್ಮ ಭಾವನೆಗಳ ಬಗ್ಗೆ ನಾನು ಸಿಎಂ ಹಾಗೂ ನೀರಾವರಿ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಇಂದು ಇಲ್ಲಿ ಅಽಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದಿದ್ದೇನೆ. ನಾನು ಸಹ ಮುಳುಗಡೆ ಜಿಲ್ಲೆಯ ಶಾಸಕ ಇದ್ದೇನೆ. ಸಂತ್ರಸ್ತರ ಪರವಾಗಿ ನಾನು ಇದ್ದೇನೆ. ಅಂದು ಸಿಎಂ ಸಭೆಯಲ್ಲಿ ಎಲ್ಲವನ್ನು ಮಾತನಾಡೋಣ, ಸಭೆಗೆ ನೀವು ಬರಬೇಕು ಎಂದು ಹೇಳಿದರು.