ಮುದಗಲ್: ಪಟ್ಟಣದ ಕಿಲ್ಲಾದಲ್ಲಿನ ರಾಘವೆಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರು ರಾಘವೇಂದ್ರ ರಾಯರ 352ನೇ ಆರಾಧನೆ ಶನಿವಾರ ವಿಜೃಂಭಣೆಯಿಂದ ಜರುಗಿತು.
ಪೂರ್ವಾರಾಧನೆ ದಿನವಾದ ಗುರುವಾರ ಫಲ ಪಂಚಾಮೃತ ಅಭಿಷೇಕ, ಪ್ರವಚನ, ಸಾಮೂಹಿಕ ಅಷ್ಟೋತ್ತರ ಪಾರಾಯಣ, ಪ್ರಸಾದ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿದವು. ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣಾರಿಂದ ಮಠದಲ್ಲಿ ಸ್ವಾಧ್ಯಾಯ ಹೆಸರಿನ ಗ್ರಂಥಾಲಯ ಉದ್ಘಾಟಿಸಲಾಯಿತು. ಪಲ್ಲಕ್ಕಿ ಉತ್ಸವ ಮತ್ತು ತೊಟ್ಟಿಲು ಸೇವೆ ನಡೆಯಿತು.
ವಿವಿಧ ಕ್ಷೇತ್ರದಲ್ಲಿನ ಸಾಧಕರು ಮತ್ತು ಶ್ರೀ ಮಠಕ್ಕೆ ದಾನಿಗಳನ್ನು ಗೌರವಿಸಲಾಯಿತು. ಮಾನ್ವಿಯ ಗುರುರಾಜ ಶಾಸ್ತ್ರೀ ತಂಡ ನಡೆಸಿಕೊಟ್ಟ ಭರತ ನಾಟ್ಯ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ವಿವಿಧ ತಂಡಗಳ ಭಜನೆಯೊಂದಿಗೆ ಗುರುರಾಯರ ಮಹಾ ರಥೋತ್ಸವ ಜರುಗಿತು.
ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು. ಪ್ರಮುಖರಾದ ಡಾ.ಗುರುರಾಜ ದೇಶಪಾಂಡೆ, ಡಾ.ಎಂವಿ.ಜ್ಯೋಷಿ, ಶ್ರೀನಿವಾಸ ರಾವ್ ದೇಶಪಾಂಡೆ, ಹನುಮೇಶ ಪಟವಾರಿ, ವೆಂಕಟೇಶ ಕುಲಕರ್ಣಿ, ರಾಘವೇಂದ್ರ ದೇಶಪಾಂಡೆ, ಉಪೇಂದ್ರರಾವ್ ದೇಶಪಾಂಡೆ, ವಿಎಸ್.ಶೆಡ್ಲಗೇರಿ, ಎಲ್ಲೋಜಿರಾವ್, ಪ್ರಾಣೇಶ ಮುತಾಲಿಕ, ಆರ್‌ವಿ.ಗುಮಾಸ್ತೆ, ನಾಗರಾಜ ಗಸ್ತಿ, ಅನಿಲಕುಮಾರ ಬುಶೆಟ್ಟಿ ಇದ್ದರು.