ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ಐತಿಹಾಸಿಕ ರಾಘವ ಚೈತನ್ಯ ಶಿವಲಿಂಗದ ಜೀರ್ಣೋದ್ಧಾರ, ಲಿಂಗಕ್ಕೆ ಪೂಜೆಗೆ ಅವಕಾಶ, ನಾಡಿನ ಕಲ್ಯಾಣಕ್ಕೆ ಪ್ರಾರ್ಥಿಸಿ ಹಿಂದು ಭಕ್ತರಿಂದ ಶಿವಮಾಲೆ ಧಾರಣೆ ಮಾಡಿದ್ದು, ಫೆ.೨೬ರಂದು ಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಹೈಕೋರ್ಟ್ಗೆ ಹೋಗಲಾಗಿದೆ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ನಗರದ ರಾಮಂದಿರದಲ್ಲಿ ಶಿವಮಾಲಾಧಾರಣೆ ಕಾರ್ಯಕ್ರಮದ ನಂತರ ಮಾತನಾಡಿ, ಶಿವರಾತ್ರಿಯಂದು ಲಿಂಗಕ್ಕೆ ಪೂಜೆ ಸಲ್ಲಿಸಲು ಸ್ವಾಮೀಜಿಗಳು ಸೇರಿ ೫೦೦ ಜನರಿಗೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ, ತಿರಸ್ಕಾರವೂ ಮಾಡುತ್ತಿಲ್ಲ. ಆದ್ದರಿಂದ ಹೈಕೋರ್ಟ್ಗೆ ಹೋಗಲಾಗಿದೆ. ನಮ್ಮ ದೇವರ ಪೂಜೆಗೆ ಸರ್ಕಾರ ಅನುಮತಿ ಏಕೆ ಬೇಕು? ಹಿಂದುಗಳಿಗೆ ನಿರ್ಬಂಧ ಹೇರಿರುವುದು ಇಡೀ ಸಮಾಜಕ್ಕೆ ಅಪಮಾನ ಎಂದು ಕಿಡಿ ಕಾರಿದರು.
೨೦೨೨ರಲ್ಲಿ ಶಿವಲಿಂಗಕ್ಕೆ ಮುಸ್ಲಿಂ ವ್ಯಕ್ತಿ ಅಪಚಾರ ಎಸಗಿದ ನಂತರ ಶುದ್ಧೀಕರಣ ಹೋರಾಟಕ್ಕೆ ಮುತಾಲಿಕರು, ಚೈತ್ರಾ ಕುಂದಾಪುರ, ನನ್ನನ್ನು ತಡೆಯಲಾಯಿತು. ನಂತರ ಕೇಂದ್ರ ಸಚಿವರು, ಶಾಸಕರು, ಜನಪ್ರತಿನಿಧಿಗಳು ಪೂಜೆಗೆ ಹೋದಾಗ ಕಲ್ಲು ಹೊಡೆಯಲಾಯಿತು. ಪೊಲೀಸರು ಹಲ್ಲೆಗೀಡಾದರು. ನಂತರದಿAದ ಪ್ರತಿ ವರ್ಷ ಹೋರಾಟ ನಡೆಸಲಾಗುತ್ತಿದೆ ಎಂದರು.
ಕಾನೂನಾತ್ಮಕ ಹೋರಾಟ: ವಕ್ಫ್ ಬೋರ್ಡ್ನಲ್ಲಿ ಹಿಂದೆ ದರ್ಗಾ ಸಮಿತಿಯವರು ಅರ್ಜಿ ಸಲ್ಲಿಸಿದ್ದರು, ಹಿಂದುಗಳ ಪರ ತೀರ್ಪು ಬಂದಿತ್ತು. ಪ್ರಸಕ್ತ ವರ್ಷ ಕಾನೂನಾತ್ಮಕ ತೊಂದರೆಯಿAದ ದರ್ಗಾ ಪರ ತೀರ್ಪು ಬಂದಿದೆ. ಅದರ ವಿರುದ್ಧ ಹೈಕೋರ್ಟ್ ಮೊರೆ ಹೋಗಲಾಗಿದೆ. ಜೀರ್ಣೋದ್ಧಾರಕ್ಕೆ ಪುರಸಭೆಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಕರ್ನಾಟಕ ಸರ್ಕಾರ ಪ್ರಕಟಿಸಿದ ಪುಸ್ತಕದಲ್ಲೇ ದೇವಸ್ಥಾನದ ಉಲ್ಲೇಖವಿದೆ. ಸಾಕಷ್ಟು ಸಾಹಿತ್ಯ ಲಭ್ಯವಿದೆ. ಕಾನೂನು ಹೋರಾಟ ನಡೆದಿದೆ ಎಂದು ತಿಳಿಸಿದರು.
೨೫ಕ್ಕೂ ಹೆಚ್ಚು ಯುವಕರು ರಾಮಮಂದಿರದಲ್ಲಿ ವಿಶೇಷ ಪೂಜೆ, ಗಣಹೋಮ ನಡೆಸಿ, ಶಿವಮಾಲಾಧಾರಣೆ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಾರಾಯ ಕಂಬಾರ, ಸಿದ್ದು ಹಿರೇಮಠ, ಉಪಾಧ್ಯಕ್ಷ ಮಹೇಶ ಯಾದವ್, ಪ್ರಮುಖರಾದ ಶಿವು ಅವರಳಿ, ವಿಷ್ಣು ಟೆಂಗಳಿ, ಓಂಕಾರ ಯಾದವ, ಪರಮೇಶ್ವರ ಮೂಲಗೆ, ಶರಣಗೌಡ ಪಾಟೀಲ್, ಶರಣು ಪಾಟೀಲ್, ರಮೇಶ ಆಂದೋಲಾ, ಗುರುಶಾಂತ ಟೆಂಗಳಿ, ರಾಕೇಶ ಜಾಧವ್, ಮಡಿವಾಳ ಅಮರಾವತಿ, ಸಿದ್ದು ಪಾಟೀಲ್, ರಾಕೇಶ ಜಳಕಿ ಇತರರಿದ್ದರು.