ವಿಶೇಷ ವರದಿ ತುಮಕೂರು
ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ಜಿಲ್ಲೆಯಲ್ಲಿ 10 ಕೇಂದ್ರಗಳಲ್ಲಿ ಡಿ.1ರಿಂದಲೇ ಆರಂಭಿಸಿರುವ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ 33255 ರೈತರು ಹೆಸರು ನೋಂದಾಯಿಸಿಕೊಂಡು 5.8 ಲಕ್ಷ ಕ್ವಿಂಟಾಲ್ ರಾಗಿ ಮಾರಾಟಕ್ಕೆ ಅವಕಾಶ ಪಡೆದಿದ್ದಾರೆ.
ಕುಣಿಗಲ್ ತಾಲೂಕಿನಲ್ಲಿ 2 ಖರೀದಿ ಕೇಂದ್ರ ಹಾಗೂ ತುಮಕೂರು, ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಪಟೂರು, ತುರುವೇಕೆರೆ, ಗುಬ್ಬಿ ತಾಲೂಕಿನಲ್ಲಿ ತಲಾ ಒಂದರಂತೆ ಜಿಲ್ಲೆಯಲ್ಲಿ 10 ರಾಗಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು 9837 ರೈತರು ಈಗಾಗಲೇ ನೋಂದಣಿ ಮಾಡಿದ್ದಾರೆ. ಕನಿಷ್ಠ ಬೆಂಬಲ ಯೋಜನೆಯಡಿ ಒಂದು ಕ್ವಿಂಟಾಲ್ ರಾಗಿಗೆ 4290 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ರಾಗಿ ಖರೀದಿ ಪ್ರಕ್ರಿಯೆ ಕಾರ್ಯವನ್ನು 2025ರ ಜನವರಿ 1ರಿಂದ ಮಾರ್ಚ್ 31ರ ನಡೆಸಲು ಸರ್ಕಾರ ಸೂಚಿಸಿದೆ. ನೋಂದಣಿಗಾಗಿ ಕೃಷಿ ಇಲಾಖೆ ನೀಡಿರುವ ್ರೂಟ್ಸ್ ಐಡಿ, ಆಧಾರ್ ಕಾರ್ಡ್ ಹಾಜರುಪಡಿಸಬೇಕಿದೆ. ರಾಗಿ ಖರೀದಿ ಹಂತದಲ್ಲಿ ಎಫ್ಎಕ್ಯೂ ಗುಣಮಟ್ಟವನ್ನು ಪರಿಶೀಲಿಸಿ ದೃಢೀಕರಿಸಲು ಪ್ರತಿ ಖರೀದಿ ಕೇಂದ್ರಕ್ಕೆ ತಲಾ ಒಬ್ಬ ಪರೀಕ್ಷಕರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಕೊನೆಯ ಸಮಯದಲ್ಲಿ ಸುರಿದ ಮಳೆಗೆ ಸಾಕಷ್ಟು ಕಡೆ ಬೆಳೆಯೂ ನಷ್ಟವಾಗಿದೆ, ಜಿಟಿಜಿಟಿ ಮಳೆಯೂ ಒಕ್ಕಣೆಗೆ ಅಡ್ಡಿಯಾಗಿದೆ. ಬಹುತೇಕ ಕಡೆಗಳಲ್ಲಿ ಸಾಂಪ್ರದಾಯಿಕ ಕಣ ನಿರ್ಮಿಸುವ ಗೋಜಿಗೆ ಹೋಗದೆ
ಬೃಹತ್ ಯಂತ್ರಗಳ ಸಹಾಯದಿಂದ ಒಕ್ಕಣೆ ಮಾಡಿಕೊಳ್ಳಲಾಗಿದೆ.
ಡಿ.31ರ ವರೆಗೆ ನೋಂದಣಿ ನಡೆಯಲಿದ್ದು, ರಜಾ ದಿನಗಳಲ್ಲಿಯೂ ನೋಂದಣಿ ಮಾಡುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ, ಕೇಂದ್ರಗಳಲ್ಲಿ ಲೋಪಗಳು ಕಂಡುಬಂದರೆ ಕೂಡಲೇ ಡಿಸಿಗೆ ರೈತರು ದೂರು ನೀಡಬಹುದು. ಯಂತ್ರಗಳ ಮೂಲಕ ನಡೆಸುವ ಒಕ್ಕಣೆಯಲ್ಲಿ ರಾಗಿ ಜತೆ ಬೆಳೆಯುವ ಕಳೆ ಸಸ್ಯ ಅಣ್ಣೇಕಡ್ಡಿಯ ಬೀಜಗಳೇ ಹೆಚ್ಚಾಗಿ ಸೇರ್ಪಡೆಯಾಗಿರುವ ಆತಂಕವಿದೆ, ಸೊಪ್ಪಾಗಿ ಉತ್ತಮ ಪೌಷ್ಟಿಕಾಂಶವಿರುವ ಆಹಾರ ಎನ್ನಿಸಿರುವ ಅಣ್ಣೆಸೊಪ್ಪಿನ ಬೀಜಗಳೂ ರಾಗಿಯನ್ನೇ ಹೋಲುತ್ತಿದ್ದು, ಭವಿಷ್ಯದಲ್ಲಿ ಅಣ್ಣೇಬಿಜದ ಮುದ್ದೆ ತಿನ್ನುವಂತಾದರೂ ಆಶ್ಚರ್ಯ ಪಡುವಂತಿಲ್ಲ. ನೋಂದಣಿ ಮಾಡುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ, ಕೇಂದ್ರಗಳಲ್ಲಿ ಲೋಪಗಳು ಕಂಡುಬಂದರೆ ಕೂಡಲೇ ಡಿಸಿಗೆ ರೈತರು ದೂರು ನೀಡಬಹುದು. ಯಂತ್ರಗಳ ಮೂಲಕ ನಡೆಸುವ ಒಕ್ಕಣೆಯಲ್ಲಿ ರಾಗಿ ಜತೆ ಬೆಳೆಯುವ ಕಳೆ ಸಸ್ಯ ಅಣ್ಣೇಕಡ್ಡಿಯ ಬೀಜಗಳೇ ಹೆಚ್ಚಾಗಿ ಸೇರ್ಪಡೆಯಾಗಿರುವ ಆತಂಕವಿದೆ, ಸೊಪ್ಪಾಗಿ ಉತ್ತಮ ಪೌಷ್ಟಿಕಾಂಶವಿರುವ ಆಹಾರ ಎನ್ನಿಸಿರುವ ಅಣ್ಣೆಸೊಪ್ಪಿನ ಬೀಜಗಳೂ ರಾಗಿಯನ್ನೇ ಹೋಲುತ್ತಿದ್ದು, ಭವಿಷ್ಯದಲ್ಲಿ ಅಣ್ಣೇಬಿಜದ ಮುದ್ದೆ ತಿನ್ನುವಂತಾದರೂ ಆಶ್ಚರ್ಯ ಪಡುವಂತಿಲ್ಲ.
ರಾಜ್ಯದಲ್ಲೇ ತುಮಕೂರು ಹೆಚ್ಚು: ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ನೋಂದಣಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 33,255 ರೈತರು, ಬೆಂಗಳೂರು ಗ್ರಾಮಾಂತರದಲ್ಲಿ 13,101 ರೈತರು, ಬೆಂಗಳೂರು ನಗರ 977, ಚಾಮರಾಜನಗರ 78, ಚಿಕ್ಕಬಳ್ಳಾಪುರ 3693, ಚಿಕ್ಕಮಗಳೂರು 12,849, ಚಿತ್ರದುರ್ಗ 5,489, ದಾವಣಗೆರೆ 1,165, ಹಾಸನ 26,138, ಕೋಲಾರ 2,415, ಮಂಡ್ಯ 8,581, ಮೈಸೂರು 18,805, ರಾಮನಗರ 6,294, ವಿಜಯನಗರ 2,188 ಸೇರಿ ರಾಜ್ಯದಲ್ಲಿ ಒಟ್ಟು 1,41,322 ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಮಾರಾಟ ಮಾಡಲು ಹೆಸರು ನೋಂದಾಯಿಸಿದ್ದಾರೆ. 1384 ರೈತರು ಕನಿಷ್ಠ ಬೆಂಬಲ ಯೋಜನೆಯಲ್ಲಿ ಬತ್ತ ಮಾರಾಟ ಮಾಡಲು ರಾಜ್ಯದ ಬಳ್ಳಾರಿ, ಹಾಸನ, ಹಾವೇರಿ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಿಂದ ನೋಂದಣಿ ಆಗಿದೆ.