ತುಮಕೂರು: ನಗರದ ಸದಾಶಿವನಗರ ಶ್ರೀಲಕ್ಷಿ$್ಮನರಸಿಂಹಸ್ವಾಮಿ ದೇವಾಲಯದ 29ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ತಿರುಕಲ್ಯಾಣೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಭಕ್ತಿಗೆ ಎಲ್ಲೆಡೆ ಪ್ರಾಧಾನ್ಯತೆ ಇದೆ. ಉಡುಪಿ ಕೃಷ್ಣಮಠದಲ್ಲಿ ಕನಕದಾಸರಿಗೆ ಕೃಷ್ಣನ ದರ್ಶನಕ್ಕೆ ಅಡ್ಡಿಯಂಟಾದಾಗ, ಕನಕದಾಸರ ನಿಜ ಭಕ್ತಿಗೆ ಕೃಷ್ಣನೇ ಒಲಿದ ಪ್ರಸಂಗವನ್ನು ನಾವೆಲ್ಲರೂ ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ನಿಮ್ಮ ಭಕ್ತಿಯಲ್ಲಿ ನಿಜವಿದ್ದರೇ ಭಗವಂತನೂ ಒಲಿಯುತ್ತಾನೆ ಎಂದರು.
ಸುಮಾರು 29 ವರ್ಷಗಳ ಹಿಂದಿನಿಂದಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಾತ್ರಾ ಮಹೋತ್ಸವ ನಡೆಸುತ್ತಿರುವ ಭಗವಂತನ ನಿಜ ಭಕ್ತ. ಸುಗ್ಗಿ ನಂತರ ಎಲ್ಲೆಡೆ ಜಾತ್ರೆ, ಉತ್ಸವಗಳು ನಡೆಯುತ್ತವೆ. ನಿಮ್ಮಗಳ ಜತೆಗೆ ನಿಮ್ಮ ಮಕ್ಕಳನ್ನು ಕರೆತಂದು, ಇಂತಹ ಆಚರಣೆಗಳನ್ನು ಪರಿಚಯಿಸುವುದರಿಂದ ಅದು ಮುಂದಿನ ಪೀಳಿಗೆಗೆ ಪಸರಿಸಲು ಸಾಧ್ಯ. ಮಕ್ಕಳಿಗೆ ವಿದ್ಯೆಯ ಜತೆಗೆ, ಲೋಕಜ್ಞಾನವು ಲಭ್ಯವಾಗಲಿದೆ ಎಂದರು.
ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀವಿರಬಸವ ಮಹಾಸ್ವಾಮೀಜಿ ಮಾತನಾಡಿ, 144 ವರ್ಷಗಳ ನಂತರ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯುತ್ತಿದೆ. ಅದೇ ರೀತಿ ಇಲ್ಲಿ ತಿರುಕಲ್ಯಾಣೋತ್ಸವ ನಡೆಯುತ್ತಿದೆ. ಎರಡರಲ್ಲಿಯೂ ಭಕ್ತಿ ಅಡಗಿದೆ. ಮುಕ್ತಿಗೆ ಭಕ್ತಿಯೊಂದೇ ಮಾರ್ಗ. ಹಾಗಾಗಿ ತಾವು ಮಾಡುವ ಕೆಲಸವನ್ನು ಭಕ್ತಿಯಿಂದ ಮಾಡಿದರೇ ಹೆಚ್ಚು ಉಪಯುಕ್ತವಾಗಲಿದೆ ಎಂದರು. ಎಷ್ಟೇ ಶ್ರೀಮಂತರಾದರೂ ಪರೋಪಕಾರದಿಂದ ಮಾತ್ರ ಜನಾನುರಾಗಿಯಾಗಲು ಸಾಧ್ಯ, ಪರೋಪಕಾರಂ ಇದಂ ಶರೀರಂ ಎಂಬ ಮಾತನ್ನು ಎಲ್ಲರೂ ಅನುಸರಿಸಬೇಕು. ಮರಿಯಪ್ಪನವರ ಕುಟುಂಬ ಕಳೆದ 29 ವರ್ಷಗಳಿಂದಲೂ ಲಕ್ಷಿ$್ಮನರಸಿಂಹಸ್ವಾಮಿ ದೇವಾಲಯ ಕಟ್ಟಿ ಜನರಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿದ್ದಾರೆ ಎಂದರು. ತಿರುಕಲ್ಯಾಣೋತ್ಸವದ ಅಂಗವಾಗಿ ಶ್ರೀಲಕ್ಷಿ$್ಮನರಸಿಂಹಸ್ವಾಮಿಗೆ ಸುಪ್ರಭಾತ ಸೇವೆ, ಗಂಗಾಪೂಜೆ, ಅಂಕುರಾರ್ಪಣೆ, ಕಂಗಣಧಾರಣೆ, ಮಹಾಮಂಗಳಾತಿ, ಪ್ರಸಾದ ವಿನಿಯೋಗ ನಡೆಯಿತು. ದೇವಾಲಯದ ನರಸೇಗೌಡ, ಮಾದೇಗೌಡ, ಮಹದೇವಣ್ಣ, ಸುಗ್ಗನಹಳ್ಳಿ ನರಸಿಂಹಮೂರ್ತಿ, ಸಿಂಗೇಗೌಡ,ಬ್ಯಾಟರಂಗೇಗೌಡ, ಕೆ.ವೆಂಕಟೇಶಯ್ಯ ಮತ್ತಿತರರು ಇದ್ದರು.