ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿ ಗಾಂಧಿನಗರ ವಾರ್ಡ್‌ನಿಂದ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ರಹಮತ್‌ಉಲ್ಲಾ ಅಸಾದಿ ಅವಿರೋಧವಾಗಿ ಆಯ್ಕೆಯಾಗಿದರು. ಜಯಪ್ರಕಾಶ್ ಶೆಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. 15 ಸದಸ್ಯ ಬಲದ ಪಪಂನಲ್ಲಿ 9 ಮಂದಿ ಕಾಂಗ್ರೆಸ್ ಹಾಗೂ 6 ಮಂದಿ ಬಿಜೆಪಿ ಸದಸ್ಯರಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಚುನಾವಣಾಧಿಕಾರಿ ತಹಸೀಲ್ದಾರ್ ಅಮೃತ್ ಆತ್ರೇಶ್ ಅವಿರೋಧ ಆಯ್ಕೆ ಘೋಷಿಸಿದರು.
ಪಪಂ ಆಡಳಿತದ ಮೊದಲ 30 ತಿಂಗಳ ಅವಧಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಪಕ್ಷದೊಳಗಿನ 15 ತಿಂಗಳ ಒಪ್ಪಂದದ ಪ್ರಕಾರ ಜಯಪ್ರಕಾಶ್ ಶೆಟ್ಟಿೆ ರಾಜೀನಾಮೆ ನೀಡಿದ್ದರು. ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ರಹಮತ್‌ಉಲ್ಲಾ ಅಸಾದಿ ಆಯ್ಕೆಯಾಗಿದ್ದಾರೆ. ಈ ಮೊದಲು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಇವರು ಆಡಳಿತದಲ್ಲಿ ಅನುಭವವುಳ್ಳವರಾಗಿದ್ದಾರೆ. 2001ರಲ್ಲಿ ಜೆಡಿಎಸ್‌ನಿಂದ ಚುನಾಯಿತರಾಗಿದ್ದ ರಹಮತ್‌ಉಲ್ಲಾ ಅಸಾದಿ ನಂತರದ ಎರಡು ಚುನಾವಣೆಯಲ್ಲಿ ಬಿಜೆಪಿಯಿಂದ 2007 ಮತ್ತು 2013ರಲ್ಲಿ ಗೆಲುವು ಸಾಧಿಸಿದ್ದು ಮಾತ್ರವಲ್ಲದೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುವ ಅವಕಾಶವನ್ನು ಪಡೆದಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.