filter: 153; fileterIntensity: 0.08; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.32990724, 0.40833333);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 32; 
ಜಿಲ್ಲೆ

ರಸ್ತೆಯೋ, ಕೆಸರು ಗದ್ದೆಯೋ!

ಬೆಳಗಾವಿ: ನಗರದ ಕಾಂಗ್ರೆಸ್ ರಸ್ತೆಯಿಂದ ಚನ್ನಮ್ಮ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಡೆದಿದ್ದ ಡ್ರೈನೇಜ್ ಕಾಮಗಾರಿ ಈಚೆಗೆ ಪೂರ್ಣಗೊಂಡಿದೆ. ಆದರೆ, ಕಾಮಗಾರಿ ತಗ್ಗುಗಳನ್ನು ಬೇಕಾಬಿಟ್ಟಿಯಾಗಿ ಮುಚ್ಚಿರುವ ಕಾರಣಕ್ಕೆ ಮಳೆಯಿಂದ ರಸ್ತೆಯೆಲ್ಲ ಕೆಸರು ಗದ್ದೆಯಂತಾಗಿದೆ.

ಈ ಡ್ರೈನೇಜ್ ಕಾಮಗಾರಿ ಆರಂಭಗೊಂಡಾಗಿನಿಂದಲೇ ಚನ್ನಮ್ಮ ನಗರ ಪ್ರಮುಖ ರಸ್ತೆ ಸಂಪರ್ಕ ಕಳೆದುಕೊಂಡಿದೆ. ಬಸ್ ಸಹ ಉತ್ಸವ ಹೋಟೆಲ್ ರಸ್ತೆ ಮೂಲಕ ಸುತ್ತುವರೆದು ಬರುತ್ತಿವೆ. ಬಸ್‌ಗಳನ್ನೇ ಅವಲಂಬಿಸಿರುವ ಜನರ ಪರದಾಟ ಇನ್ನೂ ತಪ್ಪಿಲ್ಲ.

ಕಾರು ಇರುವವರು ಸುತ್ತುವರಿದೇ ಬರಬೇಕಿದೆ. ಒಂದು ವೇಳೆ ತಿಳಿಯದೆ ರಸ್ತೆಯಲ್ಲಿ ಹೋದರೆ ಕೆಸರಿನಲ್ಲಿ ಸಿಲುಕಿ ಪರದಾಡುವುದು ಖಚಿತ.