ಜಿಲ್ಲೆ

ರಸ್ತೆಯಿಂದ ಸಂಚಾರಕ್ಕೆ ಅನುಕೂಲ

ಸಂಬರಗಿ: ಬ್ರಿಟಿಷರ ಕಾಲದಿಂದ ಜಂಬಗಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಕೆಲಸ ನಡೆದಿರಲಿಲ್ಲ. ಶಾಸಕ ಲಕ್ಷ್ಮಣ ಸವದಿ ಪ್ರಯತ್ನದಿಂದ ೭೦ ವರ್ಷಗಳ ನಂತರ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಮದಭಾಂವಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ನಿಜಗುಣಿ ಮಗದುಮ್ ಹೇಳಿದರು.

ಮದಭಾಂವಿ ಗ್ರಾಮದಲ್ಲಿ ಸಿದ್ದೇಶ್ವರ ದೇವಸ್ಥಾನ ಹತ್ತಿರ ೧೦ ಲಕ್ಷ ರೂ.ಅನುದಾನದಡಿ ಸಿಡಿ ಹಾಗೂ ಜಂಬಗಿ ಗ್ರಾಮದ ಸಂಪರ್ಕ ರಸ್ತೆಯ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಚುನಾವಣೆಯಲ್ಲಿ ಶಾಸಕರು ನೀಡಿದ ಆಶ್ವಾಸನೆ ಈಡೇರಿಸುತ್ತಿದ್ದಾರೆ. ಕ್ಷೇತ್ರದ ಜನರ ಕಷ್ಟದಲ್ಲಿ ಭಾಗಿಯಾಗುತ್ತಾರೆ. ಡಾಂಬರೀಕರಣದಿಂದ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಪಿಕೆಪಿಎಸ್ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ ಪೂಜಾರಿ, ಮನೋಹರ ಪೂಜಾರಿ, ಈಶ್ವರ ಕುಂಬಾರ, ಮುರಗೆಪ್ಪ ಮಗದುಮ್, ನಿಖಿಲ ಪಾಟೀಲ, ರಾಮಣ್ಣ ಮಗದುಮ್, ರಾವಸಾಬ ನೀವಲಗಿ, ರಂಜಿತ ಪೂಜಾರಿ, ಆಕಾಶ ನಾಯಿಕ, ಕಲ್ಲಪ್ಪ ಪೂಜಾರಿ, ಶಿವನಿಂಗ ಮಗದುಮ್, ಅಪ್ಪು ಚೌಗಲಾ, ಸಿದಲಿಂಗ ಇಬ್ರಾಹಿಂಪುರ, ಸದಾಶಿವ ಪ್ರಧಾನಿ, ಗುತ್ತಿಗೆದಾರ ಮಲ್ಲು ಅವಟಿ ಇತರರಿದ್ದರು.