ಜಿಲ್ಲೆ

ರಸ್ತೆಯಲ್ಲಿನ ಮುಳ್ಳು-ಕಂಟಿ ತೆರವು

ಶಿಗ್ಲಿ: ಲಕ್ಷೆ್ಮೕಶ್ವರ ತಾಲೂಕಿನ ಸಂತೆ ಶಿಗ್ಲಿಯಿಂದ ಹಾವೇರಿ ಜಿಲ್ಲೆಯ ಹೂವಿನ ಶಿಗ್ಲಿ ಸಂಪರ್ಕ ರಸ್ತೆಯಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.

ಸವಣೂರ ಭಾಗದ ಪಿಡಬ್ಲುಡಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎರಡೂವರೆ ಕಿಮೀ ರಸ್ತೆಯಲ್ಲಿನ ಇಕ್ಕೆಲಗಳಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ತೆರವುಗೊಳಿಸಿದ್ದಾರೆ. ‘ರಸ್ತೆಯುದ್ದಕ್ಕೂ ತಗ್ಗು-ಗುಂಡಿ, ಮುಳ್ಳು ಕಂಟಿ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತಗ್ಗು ಗುಂಡಿಗಳಿಗೆ ಟ್ರ್ಯಾಕ್ಟರ್ ಮೂಲಕ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಿದರು. ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೂವಿನಶಿಗ್ಲಿ ವಿರಕ್ತಮಠದ ಜಾತ್ರೆಯ ಹಿನ್ನೆಲೆಯಲ್ಲಿ ರಸ್ತೆಯಲ್ಲಿನ ಗುಂಡಿ ಮುಚ್ಚಿಸಿ, ಮುಳ್ಳುಕಂಟಿ ತೆರವುಗೊಳಿಸಿರುವ ಕಾರ್ಯ ಶ್ಲಾಘನೀಯವಾಗಿದೆ. |ಶ್ರೀ ಚನ್ನವೀರ ಮಹಾಸ್ವ್ವಾಮಿಗಳು ಹೂವಿನಶಿಗ್ಲಿ. ಸವನೂರು ತಾಲೂಕು, ಹಾವೇರಿ ಜಿಲ್ಲೆ.

EndFragment