ಯಾದಗಿರಿ: ತಾಲೂಕಿನ ಮುಂಡರಗಿ, ಬೆಳೆಗೇರಾ ಗ್ರಾಮದ ಮಧ್ಯದಲ್ಲಿನ ರಸ್ತೆ ಸೇತುವೆ ಕಳೆದ ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಕೊಚ್ಚಿಹೋದ ಪರಿಣಾಮ ಇಡೀ ರಸ್ತೆ ಕೆರೆಯಂತಾಗಿದ್ದು, ಇದೀಗ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗದ ಕಾರಣ ಸಿಡಿದೆದ್ದ ರೈತರು ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಜಿಲ್ಲಾ ಕೇಂದ್ರದಿಂದ 6 ಕಿ.ಮೀ.ಅಂತರದಲ್ಲಿರುವ ಮುಂಡರಗಿ ಬೆಳಗೇರಾ ರಸ್ತೆ ಕೋಟಗೇರಾ, ಗಾಜರಕೋಟ, ಸೇಡಂ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲಿದೆ. ಕಳೆದ ಕೆಲವು ದಿನಗಳಿಂದ ಮಳೆಗೆ ರಸ್ತೆ ಮಧ್ಯದಲ್ಲಿನ ಸೇತುವೆ ಸಂಪೂಣ್ ಹಾಳಾಗಿದೆ. ಆದರೆ, ಅಕಾರಿಗಳು ಮರಮ್ ಹಾಕಿ ಕೈ ತೊಳೆದುಕೊಂಡಿದ್ದು, ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಬೆಳಗೇರಾ ಗ್ರಾಮಸ್ಥರು ದೂರದ ಹೊನಿಗೇರಾ ಬಂದಳ್ಳಿ ರಸ್ತೆಯ ಮೂಲಕ ಯಾದಗಿರಿ ನಗರಕ್ಕೆ ಸಂಚಾರ ಮಾಡುವಂತಾಗಿದೆ.
ರಸ್ತೆ ಸ್ಥಿತಿ ಈ ರೀತಿ ಇರುವ ಕಾರಣ ಕಳೆದೊಂದು ದಶಕದಿಂದ ಈ ಗ್ರಾಮಗಳಿಗೆ ಸಾರಿಗೆ ಬಸ್ನ ಸಂಪರ್ಕವಿಲ್ಲದಂತಾಗಿದೆ. ಇದರಿಂದ ಶಾಲಾ, ಕಾಲೇಜು ವಿದ್ಯಾಥರ್ಿಗಳಿಗೆ ತೀವೃ ತೊಂದರೆಯಾಗಿದೆ. ಕೂಡಲೇ ಜಿಲ್ಲಾಡಳಿತ ಈ ರಸ್ತೆಯನ್ನು ದುರಸ್ಥಿಗೊಳಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಹೈದರಾಬಾದ್ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ್, ಗ್ರಾಮಸ್ಥರಾದ ಆಂಜನೇಯ ನಾಯ್ಕೋಡಿ, ಚಂದ್ರಯ್ಯ ಗುತ್ತೇದಾರ,
ಸೋಮನಗೌಡ, ಸಾಬಣ್ಣ ಪ್ಯಾಟಿ, ಮಹಾದೇವ, ಲಕ್ಷ್ಮಣ, ಮಶಾಕ್ ಅಲಿ, ಅಯ್ಯಪ್ಪ, ಮಾದೇವಪ್ಪ,, ಮೋನಪ್ಪ, ಕಾಸೀಂ, ಮರಿಲಿಂಗ, ಲೋಕೇಶ, ಜಗದೇವ, ಮೋನಪ್ಪ, ಶರಣಪ್ಪ, ಮುತ್ತಮ್ಮ, ಅಳ್ಳೆಮ್ಮ, ಬಸಲಿಂಗಮ್ಮ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.