ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಗತ್ತೇ ಮೆಚ್ಚಿಕೊಂಡಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮೋದಿಯಿಂದ ದೇಶ ಹಾಳಾಗಿದೆ ಎನ್ನುತ್ತಾರೆ. ಯಾರಿಂದ ದೇಶ ಹಾಳಾಗಿದೆ ಎಂದು ವಿಚಾರ ಮಾಡಿ ನೋಡಿಲಿ ಎಂದು ಕಿಡಿಕಾರಿದರು.
ನಗರದ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕಾರದಲ್ಲಿ ಟೀಕೆ ಸಹಜ. ಆದರೆ, ಟೀಕೆ ಮಾಡುವಾಗಲೂ ಯೋಚಿಸಿ ಮಾಡಬೇಕು. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಇವರ ಅಭಿವೃದ್ಧಿ ಏನೆಂದು ರಸ್ತೆಗಳನ್ನು ನೋಡಿದರೆ ತಿಳಿಯುತ್ತದೆ. ಒಂದೊಂದು ರಸ್ತೆಯಲ್ಲಿ ತೊಟ್ಟಿಲು ಕಟ್ಟುವಂಥ ಸ್ಥಿತಿ ಇದೆ. ಖಜಾನೆ ಹಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಸ್ವತಃ ಸಿಎಂ ಅಭಿವೃದ್ಧಿಗೆ ಹಣ ಇಲ್ಲ ಎಂದು ಶಾಸಕರಿಗೆ ಹೇಳುತ್ತಿದ್ದಾರೆಂದು ಛೇಡಿಸಿದರು.
ಇವರಿಂದ ಮೋದಿ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಯಾರೇ ಆಗಲಿ ಅಭಿವೃದ್ಧಿ ಬೆಂಬಲಿಸಬೇಕು. ಅದು ಬಿಟ್ಟು ಎಲ್ಲದರಲ್ಲೂ ಕುಹುಕ ಹುಡುಕಬಾರದು. ಸಿದ್ದರಾಮಯ್ಯ ಅವರಿಗೆ ಮೋದಿ ಅಭಿವೃದ್ಧಿ ಕಂಡರೆ ಹೊಟ್ಟೆಕಿಚ್ಚಾಗುತ್ತಿದೆ. ಅದಕ್ಕೆ ಹಾಗೇ ಹೇಳುತ್ತಾರೆ. ಅನಗತ್ಯ ಟೀಕೆ ಬಿಟ್ಟು ಅಭಿವೃದ್ಧಿ ಬೆಂಬಲಿಸಲಿ ಎಂದು ಸಲಹೆ ನೀಡಿದರು.