ಜಿಲ್ಲೆ

ರಸ್ತೆಪಕ್ಕದ ತಗ್ಗಿಗಿಳಿದ ಸರ್ಕಾರಿ ಬಸ್


ಉಪ್ಪಿನಬೆಟಗೇರಿ: ಪ್ರತ್ಯೇಕ ಘಟನೆಯಲ್ಲಿ ಎರಡು ಸರ್ಕಾರಿ ಬಸ್​ಗಳು ಚಾಲಕರ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ತಗ್ಗಿಗೆ ಇಳಿದಿರುವ ಘಟನೆ ಸೋಮವಾರ ನಡೆದಿದೆ.
ಒಂದು ಬಸ್ ಯಾದವಾಡ ಗ್ರಾಮದ ಹತ್ತಿರದ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಆಸ್ಪತ್ರೆ ಬಳಿ ಹಾಗೂ ಇನ್ನೊಂದು ಬಸ್ ಧಾರವಾಡ ಬಳಿಯ ಪತ್ರೆಪ್ಪಜ್ಜನ ಮಠದ ಸಮೀಪ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.