ಜಿಲ್ಲೆ

ರಸ್ತೆಗೆ ಹೇಮರಡ್ಡಿ ಮಲ್ಲಮ್ಮ ನಾಮಕರಣಕ್ಕೆ ಸೂಚನೆ

ಧರ್ಮರಾಜ ರಾಮನಗೌಡ ಪಾಟೀಲ

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್‌ನಿಂದ ಕ್ಲಬ್ ರಸ್ತೆವರೆಗಿನ ಮಾರ್ಗಕ್ಕೆ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹೆಸರು ನಾಮಕರಣ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆದೇಶಿಸಿದ್ದಾರೆ.

ಶರಣರ ಕಾಲಘಟ್ಟದಲ್ಲಿ ಸಮಾಜ ಸುಧಾರಣೆಗಾಗಿ ಶ್ರಮಿಸಿರುವ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಹೆಸರನ್ನು ರಸ್ತೆಗೆ ನಾಮಕರಣ ಮಾಡುವಂತೆ ಬೆಳಗಾವಿ ರಡ್ಡಿ ಸಂಘ ಮನವಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಆ.16ರಂದು ಜರಗುವ ಪರಿಷತ್ ಸಭೆಯಲ್ಲಿ ನಗರದ ಲಕ್ಷ್ಮೀ ಕಾಂಪ್ಲೆಕ್ಸ್‌ನಿಂದ ಕ್ಲಬ್ ರಸ್ತೆವರೆಗಿನ ಮಾರ್ಗಕ್ಕೆ ಹೆಸರಿಡಲು ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.